ಚಾಮರಾಜನಗರ: ಕೊರೊನಾ ಮಹಾಮಾರಿ ಉಲ್ಬಣಿಸುತ್ತಿರುವ ಹಿನ್ನೆಲೆ ಕೊಳ್ಳೇಗಾಲದ ವರ್ತಕರು ಮಧ್ಯಾಹದ ಬಳಿಕ ಅಂಗಡಿ-ಮುಂಗಟ್ಟು ಮುಚ್ಚಿ ಸ್ವಯಂ ಲಾಕ್ಡೌನ್ಗೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,400 ರಕ್ಕೆ ತಲುಪಿದ್ದು, ಕೊಳ್ಳೇಗಾಲ ತಾಲೂಕಿನಲ್ಲೇ 1,000 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಇಂದಿನಿಂದ ಅಕ್ಟೋಬರ್ 4ರವರೆಗೆ ಮಧ್ಯಾಹ್ನ 2.30 ನಂತರ ಅಂಗಡಿಗಳನ್ನು ಮುಚ್ಚಲು ವರ್ತಕರು ತೀರ್ಮಾನಿಸಿದ್ದಾರೆ.
ಕಳೆದ 1 ವಾರದಿಂದಲೂ ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಆರೋಗ್ಯದ ಹಿತದೃಷ್ಟಿಯಿಂದ 15 ದಿನ ಸ್ವಯಂ ಲಾಕ್ಡೌನ್ಗೆ ಮುಂದಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ವರ್ತಕರ ಸಂಘ ಮನವಿ ಮಾಡಿದೆ.