ETV Bharat / state

ವಾಸ್ತು ಪರಿಹಾರಕ್ಕೆ ಬಂದ ಮಹಿಳೆಗೆ ನಿಧಿ ಆಸೆ ತೋರಿಸಿದ ಜ್ಯೋತಿಷಿ: ಮನೆಯೊಳಗೆ ತೋಡಿದ್ರು 20 ಅಡಿ ಆಳದ ಗುಂಡಿ! - ಮಹಿಳೆಯೊಬ್ಬಳು ಕುಟುಂಬದೊಟ್ಟಿಗೆ ಸೇರಿ

ವಾಸ್ತು ಸಮಸ್ಯೆ ಇದೆ ಎಂದು ಬಂದಿದ್ದ ಮಹಿಳೆಗೆ, ಮನೆಯಲ್ಲಿ ನಿಧಿ ಇದೆ ಎಂದು ಜ್ಯೋತಿಷಿ ನಂಬಿಸಿದ್ದಾನೆ. ಇದಕ್ಕಾಗಿ ಮನೆಯೊಳಗೆ ಗುಂಡಿ ತೋಡುವಂತೆ ತಿಳಿಸಿದ್ದ. ನಂತರ ಏನಾಯ್ತು? ಸಂಪೂರ್ಣ ವರದಿ ಇಲ್ಲಿದೆ.

astrologer-deception-women-on-treasure-desire-in-chamarajanagar

author img

By ETV Bharat Karnataka Team

Published : Aug 22, 2023, 3:18 PM IST

Updated : Aug 22, 2023, 3:42 PM IST

ಚಾಮರಾಜನಗರ: ಜ್ಯೋತಿಷಿ ತೋರಿಸಿದ ನಿಧಿಯಾಸೆಗೆ ಮಹಿಳೆಯೊಬ್ಬರು ಕುಟುಂಬದೊಂದಿಗೆ ಸೇರಿ ಮನೆಯೊಳಗೆ 20 ಅಡಿ ಆಳದ ಗುಂಡಿ ತೋಡಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಭಾಗ್ಯ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಿಧಿಯಾಸೆಗೆ ಗುಂಡಿ ತೋಡಿದ ಮಾಹಿತಿ ಜನರಿಗೆ ತಿಳಿಯುತ್ತಿದ್ದಂತೆ ಮನೆ ಮಂದಿ ನಾಪತ್ತೆಯಾಗಿದ್ದಾರೆ. ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಭಾಗ್ಯ ಹೊಸ ಮನೆ ನಿರ್ಮಿಸಿದ್ದರು. ಆದರೆ, ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಮನೆ ತೊರೆದು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಸಹೋದರಿಯ ಸಂಬಂಧಿ ಪರಶಿವ ಎಂಬವರು ಭಾಗ್ಯ ಅವರಿಗೆ ಸ್ಥಳೀಯ ಜ್ಯೋತಿಷಿಯೊಬ್ಬರಲ್ಲಿಗೆ ಕರೆದುಕೊಂಡು ಹೋಗಿ ಮನೆಯ ಕುರಿತು ಶಾಸ್ತ್ರ ಕೇಳಿಸಿದ್ದರಂತೆ. ಆಗ ಜ್ಯೋತಿಷಿ ಮನೆಯಲ್ಲಿ ನಿಧಿ ಇದೆ ಎಂದು ತಿಳಿಸಿದ್ದಾನೆ.

ಮನೆಯೊಳಗೆ 20 ಅಡಿ ಗುಂಡಿ
ಮನೆಯೊಳಗೆ 20 ಅಡಿ ಆಳದ ಗುಂಡಿ

ಜ್ಯೋತಿಷಿ ಮಾತು ನಂಬಿದ ಭಾಗ್ಯ, ಮನೆಯಲ್ಲಿ ನಿಧಿ ಶೋಧಿಸಲು ಅನುಮತಿ ನೀಡಿದ್ದರು. ಜ್ಯೋತಿಷಿ ತನ್ನ ಸಹಚರರೊಂದಿಗೆ ಕಳೆದ ವಾರದ ಹಿಂದೆ ವಿ.ಎಸ್.ದೊಡ್ಡಿ ಗ್ರಾಮದಲ್ಲಿರುವ ಮನೆಗೆ ಬಂದು ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆ ನೆರವೇರಿಸಿದ್ದಾನೆ. ಯಾರಿಗೂ ತಿಳಿಯದಂತೆ ಗುಂಡಿ ತೆಗೆಯುವ ಕಾರ್ಯ ಆರಂಭಿಸಿದ್ದಾನೆ. 3 ಅಡಿ ಅಗಲ ಹಾಗೂ 20 ಅಡಿ ಆಳ ಗುಂಡಿ ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ವಿಚಾರ ಸ್ಥಳೀಯರಿಗೆ ತಿಳಿದು ಬಂದಿದೆ. ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಭಾಗ್ಯ, ಜ್ಯೋತಿಷಿ ಹಾಗೂ ಇನ್ನಿತರರು ನಾಪತ್ತೆಯಾಗಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರಿನಲ್ಲಿ ನಡೆದ ಘಟನೆ: ತುಮಕೂರಿನ ಶಿರಾ ದೊಡ್ಡ ಕೆರೆ ಸಮೀಪದ ಪುರಾತನ ಆಂಜನೇಯ ದೇಗುಲದ ಆವರಣದಲ್ಲಿ ನಿಧಿ ಇದೆ ಎಂದು ದುಷ್ಕರ್ಮಿಗಳು ಗುಂಡಿ ಅಗೆದ ಘಟನೆ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ದೇಗುಲದ ಒಳ ಆವರಣದಲ್ಲಿ ಹತ್ತಾರು ಆಳದ ಅಡಿ ಗುಂಡಿ ತೆಗೆದಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ಚಾಲಕ ಆತ್ಮಹತ್ಯೆ

Last Updated : Aug 22, 2023, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.