ಚಾಮರಾಜನಗರ: ಸಂಬಳ ಮತ್ತು ವರ್ಕ್ ಆರ್ಡರ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗ ಆರೋಗ್ಯ ಇಲಾಖೆ ನೌಕರ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಡಿಎಚ್ಒ ಕಚೇರಿಯಲ್ಲಿ ನಡೆದಿದೆ. ಡಿಎಚ್ಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹೇಶ್ ಎಂಬಾತ ಎಸಿಬಿ ಬಲೆಗೆ ಬಿದ್ದ ನೌಕರ.
ನೌಕರ ಮಹೇಶ್ ಕೊಳ್ಳೇಗಾಲದ ವ್ಯಕ್ತಿಯೊಬ್ಬರಿಗೆ ಮೂರು ತಿಂಗಳ ವೇತನ ಮತ್ತು ಕೆಲಸದ ಬಗ್ಗೆ ಆದೇಶ ನೀಡಲು ಸತಾಯಿಸಿ ಕೊನೆಗೆ 5 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಕೊಳ್ಳೇಗಾಲದ ವ್ಯಕ್ತಿಯು ಎಸಿಬಿಗೆ ದೂರು ನೀಡಿದ್ದು, ವ್ಯಕ್ತಿಯ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 3 ಸಾವಿರ ಹಣ ಪಡೆಯುವಾಗ ಮಹೇಶ್ ಅವರನ್ನು ಬಂಧಿಸಿದ್ದಾರೆ. ಹಣ ಮತ್ತು ಮಹೇಶ್ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಓದಿ : ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ