ETV Bharat / state

ಆದಿವಾಸಿಗಳ ಆರೋಗ್ಯ ಕಾಳಜಿಗೆ ಪ್ರತ್ಯೇಕ ಸೆಲ್.. ಗಡಿಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನ - separate cell opening

ಸಿಮ್ಸ್​ನಲ್ಲಿ ಆದಿವಾಸಿಗಳ ಆರೋಗ್ಯದ ಕಾಳಜಿ ಮಾಡಲು ಪ್ರತ್ಯೇಕ ಸೆಲ್​ವೊಂದನ್ನು ತೆರೆಯಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ಸಮಗ್ರ ಅಧ್ಯಯನ ಮಾಡಲು ಈ‌ ಕೋಶ ಸಹಕಾರಿಯಾಗಲಿದೆ ಎಂದು ಡಾ. ಪ್ರವೀಣ್ ತಿಳಿಸಿದ್ದಾರೆ.

separate cell opening for health care of tribals
ಆದಿವಾಸಿಗಳ ಆರೋಗ್ಯ ಕಾಳಜಿಗೆ ಪ್ರತ್ಯೇಕ ಸೆಲ್
author img

By

Published : Aug 18, 2022, 4:15 PM IST

ಚಾಮರಾಜನಗರ: ಆದಿವಾಸಿಗಳು ಆಸ್ಪತ್ರೆಗೆ ಬಂದ ವೇಳೆ ಅವರಿಗೆ ಸೂಕ್ತ ಮಾರ್ಗದರ್ಶನ, ವಿಶೇಷ ಕಾಳಜಿ ವಹಿಸಲು ಕೋಶವೊಂದು (ಸೆಲ್) ಸಿಮ್ಸ್​​ನಲ್ಲಿ ಸ್ಥಾಪನೆಯಾಗುತ್ತಿದೆ. ಈ‌ ರೀತಿಯ ಪ್ರಯತ್ನ ರಾಜ್ಯದಲ್ಲಿ ಇದೇ ಮೊದಲಾಗಿದೆ.

ಸರ್ಕಾರ ಈಗಾಗಲೇ ಈ ಘಟಕ ಸ್ಥಾಪನೆಗೆ 12 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. "ಆರೋಗ್ಯ ಮಿತ್ರ" ಎಂಬ ಬುಡಕಟ್ಟು ಜನಾಂಗದ ವ್ಯಕ್ತಿಯೋರ್ವ ಘಟಕದಲ್ಲಿದ್ದು, ಆದಿವಾಸಿಗಳು ಆಸ್ಪತ್ರೆಗೆ ಬಂದ ವೇಳೆ ಅವರಿಗೆ ಮಾರ್ಗದರ್ಶನ, ಆರೈಕೆ, ಸಂಬಂಧಪಟ್ಟ ವೈದ್ಯರ ಬಳಿಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾನೆ.

ಇದನ್ನೂ ಓದಿ: ಚಾಮರಾಜನಗರ: ವಸತಿಗೃಹದ ಸಮಸ್ಯೆಗೆ ಕಚೇರಿಯಲ್ಲಿ ವಿಷ ಸೇವಿಸಿದ ನೌಕರ

ಘಟಕ ಸ್ಥಾಪನೆಯಿಂದಾಗಿ‌‌ ಆದಿವಾಸಿಗಳ ಆರೋಗ್ಯದ ಮೇಲೆ ಸಂಶೋಧನೆ ನಡೆಸುವುದು, ಅವರಿಗೆ ಹೆಚ್ಚು ಬಾಧಿಸುವ ಕಾಯಿಲೆಗಳು, ಹೆಚ್ಚು ಆಸ್ಪತ್ರೆಗೆ ಬರುವ ಸಂದರ್ಭಗಳು ಮತ್ತು ಅವರ ಆರೋಗ್ಯದ ಬಗ್ಗೆ ಸಮಗ್ರ ಅಧ್ಯಯನ ಮಾಡಲು ಈ‌ ಕೋಶ ಸಹಕಾರಿಯಾಗಲಿದೆ ಎಂದು ಡಾ. ಪ್ರವೀಣ್ ತಿಳಿಸಿದ್ದಾರೆ.

ಕೋಶ ಸ್ಥಾಪನೆ ಸಂಬಂಧ ಕಾರ್ಯಾಗರ: ಆದಿವಾಸಿಗಳಿಗೆ ವಿಶೇಷ ಕಾಳಜಿ ತೋರುವ ಕೋಶ ಸ್ಥಾಪನೆ ಸಂಬಂಧ ಸಿಮ್ಸ್ ನಲ್ಲಿ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಗಿರಿಜನರ ಆರೋಗ್ಯದ ಮೇಲೆ ಬೀರುತ್ತಿರುವ ಅಂಶಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರು ವಿಚಾರ ಮಂಡಿಸಲಿದ್ದು, ಅವರು ಮಂಡಿಸಿದ ಅಭಿಪ್ರಾಯದ ಮೇಲೆ ಕೋಶ ಸ್ಥಾಪನೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.