ಚಾಮರಾಜನಗರ: ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೇ ಕನ್ನಡಿಗನೋರ್ವ ತಮಿಳುನಾಡಿನ ಆಸ್ಪತ್ರೆಯಲ್ಲಿ ದಿನದೂಡುತ್ತಿದ್ದು, ಕುಟುಂಬದವರು ಆರ್ಥಿಕ ಸಹಾಯಕ್ಕೆ ಮೊರೆ ಇಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದ ಶಿವಣ್ಣ (35) ಎಂಬವರು ಕೊಯಮತ್ತೂರಿನ ಎನ್ಎಸ್ಆರ್ ರಸ್ತೆಯ ಪುಲಿಮಾರಮ್ ಬಸ್ ನಿಲ್ದಾಣ ಬಳಿ ಒನ್ ಕೇರ್ ಮೆಡಿಕಲ್ ಸೆಂಟರ್ನಲ್ಲಿ ದಾಖಲಾಗಿ 1 ತಿಂಗಳಿದ್ದು, ಮೂರುವರೆ ಲಕ್ಷ ಹಣ ಪಾವತಿಸಬೇಕಿದೆ ಎಂದು ತಿಳಿದುಬಂದಿದೆ.
ಟಿಪ್ಪರ್ನಲ್ಲಿ ಒಂದು ತಿಂಗಳ ಹಿಂದೆ ತರಕಾರಿ ಸಾಗಿಸಲು ಕೂಲಿಯಾಗಿ ತೆರಳುವಾಗ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಶಿವಯ್ಯಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಒನ್ ಕೇರ್ ಆಸ್ಪತ್ರೆಯ ಐಸಿಯು ಘಟಕಕ್ಕೆ ದಾಖಲಿಸಲಾಗಿತ್ತು. ಸದ್ಯ ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು, ಲಕ್ಷಾಂತರ ರೂ. ಆಸ್ಪತ್ರೆ ಖರ್ಚನ್ನು ಭರಿಸಲಾಗದೇ ಇಡೀ ಕುಟುಂಬಕ್ಕೆ ದಿಕ್ಕುತೋಚದಾಗಿದೆ.
ಈ ಕುರಿತು ಶಿವಣ್ಣ ಅವರ ಸೋದರ ಸಂಬಂಧಿ ರಾಜೇಶ್ ಈಟಿವಿ ಭಾರತದೊಂದಿಗೆ ಮಾತನಾಡಿ, ಕೂಲಿಗಾಗಿ ತೆರಳಿ ಈ ಸ್ಥಿತಿ ಉಂಟಾಗಿದೆ. ಲಾರಿ ಮಾಲೀಕರ ವಿರುದ್ದ ದೂರು ದಾಖಲಾಗಿದೆ. ಚೇತರಿಕೆ ಕಂಡಿರುವ ಶಿವಣ್ಣ ಅವರನ್ನು ರಾಜ್ಯಕ್ಕೆ ಕರೆ ತರಲು ದಾನಿಗಳು ಸಹಾಯ ಮಾಡಬೇಕೆಂದು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದಾನಿಗಳು +91 73536 96293 ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಅವರು ಕೋರಿದ್ದಾರೆ.