ಚಾಮರಾಜನಗರ: ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ತಡರಾತ್ರಿವರೆಗೆ ಹುಂಡಿ ಎಣಿಕೆ ನಡೆದಿದ್ದು, 2 ಕೋಟಿಗೂ ಹೆಚ್ಚು ಹಣ ಮತ್ತು ಕೆ.ಜಿಗಟ್ಟಲೆ ಬೆಳ್ಳಿ ಸಂಗ್ರಹವಾಗಿದೆ.
ಬುಧವಾರ ಬೆಳಗ್ಗಿನಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 33 ದಿನಗಳಲ್ಲಿ 2,27,66,834 ರೂ ಸಂಗ್ರಹವಾಗಿದೆ. ಇದರಲ್ಲಿ ನಾಣ್ಯಗಳೇ 15 ಲಕ್ಷದಷ್ಟಿದೆ. ಇದರೊಂದಿಗೆ 57 ಗ್ರಾಂ ಚಿನ್ನ ಹಾಗೂ 3.8 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.
ದೇವಾಲಯದಲ್ಲಿ ವಿವಿಧ ಸೇವೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಾರಾಂತ್ಯ ಮತ್ತು ಸೋಮವಾರಗಳಂದು ಭಕ್ತರ ದಂಡೇ ಹರಿದು ಬಂದು ಕೇವಲ ಚಿನ್ನದ ರಥ, ಲಡ್ಡು ಮಾರಾಟ ಹಾಗೂ ಇತರೆ ಸೇವೆಗಳಿಂದಲೇ ದಿನವೊಂದಕ್ಕೆ ಸರಾಸರಿ 10-15 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 'ರೈತ ಜೀವ ಸಂಕುಲಕ್ಕೆ ಅನ್ನ ಹಾಕುವ ಎರಡನೇ ದೇವರು'