ಚಾಮರಾಜನಗರ: ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ಹಿಂದಾ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂ. ಹಣ, ಕೆಜಿಗಟ್ಟಲೆ ಬೆಳ್ಳಿ ಸಂಗ್ರಹವಾಗಿದೆ.
ಕೇವಲ 43 ದಿನಗಳಲ್ಲಿ 1 ಕೋಟಿ 87 ಲಕ್ಷದ 14,358 ರೂ. ಕಾಣಿಕೆ ಬಂದಿದೆ. ಇದರ ಜೊತೆಗೆ 50 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.
ದೇಗುಲದಲ್ಲಿ ವಿವಿಧ ಸೇವೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಾರಾಂತ್ಯ ಮತ್ತು ಸೋಮವಾರಗಳಂದು ಭಕ್ತರ ದಂಡೇ ಬೆಟ್ಟಕ್ಕೆ ಹರಿದು ಬರುತ್ತಿದೆ. ಕೊರೊನಾದಿಂದ ಸ್ಥಗಿತಗೊಂಡಿದ್ದ ಪ್ರಸಾದ ವ್ಯವಸ್ಥೆಯೂ ಕೆಲ ದಿನಗಳ ಹಿಂದೆ ಆರಂಭವಾಗಿದೆ.
ಇದನ್ನೂ ಓದಿ: ಚಿನ್ನ ಖರೀದಿಸಲು ಬಂದು ಕಳ್ಳತನ.. ಕ್ಷಣಾರ್ಧದಲ್ಲಿ ಲಕ್ಷಾಂತರ ರೂ.ಮೌಲ್ಯದ ಆಭರಣ ಕದ್ದೊಯ್ದ ಮಹಿಳಾ ಗ್ಯಾಂಗ್