ಬೆಂಗಳೂರು: ಕರ್ತವ್ಯ ಲೋಪವೆಸಗಿರುವುದು ತನಿಖೆ ವೇಳೆ ದೃಢಪಟ್ಟ ಹಿನ್ನೆಲೆ ಸಂಜಯನಗರ ಇನ್ಸ್ಪೆಕ್ಟರ್ ಗೋಪಾಲ್ ನಾಯಕ್ ಅವರನ್ನ ನಗರದ ಪೊಲೀಸ್ ಆಯುಕ್ತರು ಪೊಲೀಸ್ ಕಂಟ್ರೋಲ್ ರೂಮಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಕರ್ತವ್ಯದ ವೇಳೆ ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಪಕ್ಷದ ನಾಯಕರ ಪರವಾಗಿದ್ದರು ಎಂದು ಅನೇಕ ಸಲ ಇವರ ಮೇಲೆ ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಸಂಜಯನಗರ ಇನ್ಸ್ಪೆಕ್ಟರ್ ಗೋಪಾಲ್ ನಾಯಕ ಮೇಲಿನ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಗೋಪಾಲ್ ನಾಯಕ್ ಅವರನ್ನು ಓ.ಓ.ಡಿ ನಿಯೋಜನೆಯಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗಿದೆ.
ಸದ್ಯ ಸಂಜಯನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪಿ.ಎಸ್.ಐ.ಅಧಿಕಾರಿಯನ್ನು ಪ್ರಭಾರ ಅಧಿಕಾರಿಯನ್ನಾಗಿ ಪೊಲೀಸ್ ಆಯಕ್ತರು ನಿಯೋಜಿಸಿದ್ದಾರೆ.