ದೇವನಹಳ್ಳಿ: ಅಂಗಡಿಯವರು ನೀಡಿದ ಕಳಪೆ ಬೀಜವನ್ನು ಬಿತ್ತನೆ ಮಾಡಿ ಫಸಲು ಬಾರದೇ ರೈತ ಮೋಸ ಹೋಗಿರುವ ಘಟನೆ ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅಂಗಡಿಯೊಂದರಿಂದ ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ರೈತ ಮುನಿರಾಜು ಕುಂಬಳಕಾಯಿ ಬೀಜವನ್ನು ಖರೀದಿಸಿದ್ದು, ಅದನ್ನು ಬಿತ್ತನೆ ಮಾಡಿ ಫಸಲು ಬಾರದೇ ನಷ್ಟ ಅನುಭವಿಸಿದ್ದಾನೆ. ಅಲ್ಲದೇ ಅಂಗಡಿಯವನು ಕಳಪೆ ಕುಂಬಳಕಾಯಿ ಬೀಜ ವಿತರಣೆ ಮಾಡಿರುವುದರಿಂದ ನಮಗೆ ನಷ್ಟ ಆಗಿದೆ ಎಂದು ರೈತ ಮುನಿರಾಜು ಆರೋಪ ಮಾಡುತ್ತಿದ್ದಾರೆ.
ಜನವರಿ ತಿಂಗಳಲ್ಲಿ ಅಂಗಡಿಯಿಂದ ಕುಂಬಳಕಾಯಿ ಬೀಜಗಳನ್ನು ಖರೀದಿಸಿ ನನ್ನ ಜಮೀನಿನಲ್ಲಿ ಬಿತ್ತನೆ ಮಾಡಿದ್ದೆ. ಮೂರು ತಿಂಗಳಿಗೆ ಫಸಲು ಬರುತ್ತೆ ಅಂತಾ ಅಂಗಡಿ ಮಾಲೀಕ ತಿಳಿಸಿದ್ದ. ಆದ್ರೆ ನಾಲ್ಕು ತಿಂಗಳಾದರೂ ಫಸಲು ಬಂದಿಲ್ಲ. ಇದ್ರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಕಳಪೆ ಬೀಜದಿಂದ ನಷ್ಟವಾಗಿರುವ ಮೊತ್ತವನ್ನು ಅಂಗಡಿಯವರು ಕಟ್ಟಿಕೊಡಬೇಕು. ಇನ್ನು ಇಂತಹ ಕಳಪೆ ಬೀಜವನ್ನು ವಿತರಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಅಳಲನ್ನು ತೋಡಿಕೊಂಡಿದ್ದಾರೆ.