ETV Bharat / state

ಅವಳೊಂದಿಗೆ ಚಕ್ಕಂದವಾಡಿದ, ಬೇಡ್ವಾದಾಗ ವಿಡಿಯೋ ಮಾಡಿ ಹರಿಯಬಿಟ್ಟ.. ಪ್ರಶ್ನಿಸಿದ್ದ ಗಂಡನ ಮುಗಿಸೇಬಿಟ್ಟ ರಾಕ್ಷಸ! - undefined

ರಾಜಗೋಪಾಲ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನ ಬೇಧಿಸುವಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಸಹಚರರನ್ನ ಬಂಧಿಸಲಾಗಿದೆ.

ಆರೋಪಿಯ ಸಹಚರರು ಅಂದರ್
author img

By

Published : May 22, 2019, 5:03 PM IST

ಬೆಂಗಳೂರು: ವಿವಾಹಿತೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಜೈಲಿಗಟ್ಟಿದ್ದಕ್ಕೆ ದ್ವೇಷ ಸಾಧಿಸಿದ ಆರೋಪಿ ವಿವಾಹಿತೆಯ ಗಂಡನನ್ನೇ ತನ್ನ ಸಹಚರರ ಜೊತೆಗೂಡಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯ ಸಹಚರರು ಸಿಕ್ಕಿಬಿದ್ದಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ರವೀಶ್ ಅಲಿಯಾಸ್ ರವಿ, ಜಿತೇಂದ್ರ ಅಲಿಯಾಸ್ ಜಿತು, ಸುಮಂತರಾಜ್ ಅಲಿಯಾಸ್ ಸುಮಂತ್, ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ ಬಂಧಿತ ಆರೋಪಿಗಳು. ಆದರೆ, ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಎಂಬಾತ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಪ್ರಕರಣ..

ರಾಜಗೋಪಾಲನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಂಡ್ಯ ಮೂಲದ ಉಮೇಶ್ ಎಂಬುವರು ಕಬಾಬ್ ಅಂಗಡಿಯನ್ನ ನಡೆಸುತ್ತಿದ್ರು. 13 ವರ್ಷಗಳ ಹಿಂದೆಯೇ ರೂಪಾ ಎಂಬ ಯುವತಿಯನ್ನ ಮದುವೆಯಾಗಿದ್ರು. ಇದೇ ತಿಂಗಳ 12ರಂದು ರಾತ್ರಿ 9:30 ರ ಸುಮಾರಿಗೆ ಉಮೇಶ್ ಅಂಗಡಿಯಲ್ಲಿರುವಾಗ, ಕಿಶೋರ್ ಎಂಬಾತ ತನ್ನ ನಾಲ್ವರು ಸಹಚರರೊಂದಿಗೆ ಉಮೇಶ್​ ಕಣ್ಣಿಗೆ ಖಾರದ ಪುಡಿ ಎರಚಿ,‌ ಲಾಂಗು, ಮಚ್ಚು, ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್​

ಇದು ಕೊಲೆಗೆ ಕಾರಣ...

ಈ ಪ್ರಕರಣದ ಬಗ್ಗೆ ಉತ್ತರ ವಿಭಾಗದ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿ ಕಿಶೋರ್​ ಎಂಬುವನು ಮೃತ ಉಮೇಶ್​ ಪತ್ನಿ ರೂಪಾಳೊಂದಿಗೆ 7-8 ತಿಂಗಳಿನಿಂದ ‌ಸ್ನೇಹ ಬೆಳೆಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಬಳಿಕ ಕಿಶೋರ್ ಹಾಗೂ ರೂಪಾ ನಡುವೆ ಗಲಾಟೆಯಾಗಿತ್ತು. ಇದಕ್ಕೆ ಕಿಶೋರ್ ಪ್ರತೀಕಾರವಾಗಿ ತಾನು ರೂಪಾಳೊಂದಿಗೆ ಲೈಂಗಿಕ‌ ಕ್ರಿಯೆ ನಡೆಸುವುದನ್ನು ಆಕೆಗೆ ಗೊತ್ತಿಲ್ಲದ ರೀತಿ‌ ವಿಡಿಯೋ ರೆಕಾರ್ಡ್ ಮಾಡಿ, ಫೇಸ್​ಬುಕ್ ಖಾತೆಗೆ ಹಾಕಿದ್ದ. ಇದಕ್ಕೆ ರೂಪ‌ಾ ಗಂಡ ಉಮೇಶ್, ರಾಜಾಗೋಪಾಲ ಠಾಣೆಗೆ ತೆರಳಿ ದೂರು ನೀಡಿದ್ದ. ಬಳಿಕ ಪೊಲೀಸರು‌ ಪ್ರಕರಣದ ಆರೋಪಿ ಕಿಶೋರ್​ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ರು. ನಂತರ ಆರೋಪಿ‌ ಕಿಶೋರ್ ಹೊರಗೆ ಬಂದು ತನ್ನ ನಾಲ್ಕು ಸಹಚರರ ಜೊತೆ ಸೇರಿಕೊಂಡು ಕಿಶೋರ್​ನನ್ನ ‌‌ಕೊಲೆ‌ ಮಾಡಿದ್ದಾನೆ.

ಸದ್ಯ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಕಿಶೋರ್​ನ ಸಹಚರರಾದ ನಾಲ್ವರನ್ನ ಬಂಧಿಸಿದ್ದಾರೆ.‌ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಿಶೋರ್​ಗಾಗಿ​ ಪೊಲೀಸರು ಬಲೆ ಬೀಸಿದ್ದಾರೆ.

Intro:ಹೆಂಡತಿ ಜೊತೆ ಲೈಗಿಂಕ‌ ಕ್ರಿಯೆ ನಡೆಸಿದಕ್ಕೆ ಆರೋಪಿಯನ್ನ ಜೈಲಿಗೆ ಅಟ್ಟಿದ ಗಂಡ
ಪ್ರತಿಕಾರವಾಗಿ ಗಂಡನನ್ನೆ ಕೊಲೆ ಮಾಡಿದ ಆರೋಪಿ. ಸಹಚರರು ಇದೀಗ ಅಂದರ್

ಭವ್ಯ

ರಾಜಗೋಪಾಲ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನ ಭೇಧಿಸಿವಲ್ಲಿ ಉತ್ತರ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ರವೀಶ್ ಅಲಿಯಾಸ್ ರವಿ, ಜಿತೇಂದ್ರ ಅಲಿಯಾಸ್ ಜಿತು, ಸುಮಂತರಾಜ್ ಅಲಿಯಾಸ್ ಸುಮಂತ್, ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ ಬಂಧಿತ ಆರೋಪಿಗಳು..

ಏನಿದು ಪ್ರಕರಣ..

ರಾಜಗೋಪಾಲ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಂಡ್ಯ ಮೂಲದ ಉಮೇಶ್ ಎಂಬುವವರು ಕಬಾಬ್ ಅಂಗಡಿಯನ್ನ ನಡೆಸುತ್ತಿದ್ರು. ಹಾಗೆ ರೂಪ ಎಂಬ ಯುವತಿಯನ್ನ 13ವರ್ಷಗಳ ಹಿಂದೆ ಮದುವೆಯಾಗಿದ್ರು. ಆದ್ರೆ ಇದೇ ತಿಂಗಳ 12ರಂದು ರಾತ್ರಿ 9-30ರ ಸಂಧರ್ಭದಲ್ಲಿ ಉಮೇಶ್ ಅಂಗಡಿಯಲ್ಲಿರುವಾಗ ಕಿಶೋರ್ ಮತ್ತು ಆತನ ಸಹಚರರು ಉಮೇಶನ ಕಣ್ಣಿಗೆ ಖಾರದ ಪುಡಿ ಎರಚಿ‌ಲಾಂಗು ಮಚ್ಚು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ರು..

ಕೊಲೆಗೆ ಕಾರಣ ಏನು.

ಇನ್ನು ತನಿಖೆಯಲ್ಲಿ ಆರೋಪಿ ಕಿಶೋರು ಎಂಬುವವನು ಮೃತ ಹೊಂದಿರುವ. ಉಮೇಶನ ಪತ್ನಿ ರೂಪಾಳೊಂದಿಗೆ 7-8ತಿಂಗಳಿನಿಂದ ‌ಸ್ನೇಹ ಬೆಳೆಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧ ಹೋಂದಿದ್ದ. ಹೀಗಾಗಿ ಇತ್ತಿಚ್ಚೆಗೆ ಕಿಶೋರ್ ಹಾಗೂ ರೂಪ ನಡುವೆ ಗಲಾಟೆಯಾಗಿತ್ತು. ಇದಕ್ಕೆ ಕಿಶೋರ್ ಪ್ರತಿಕಾರವಾಗಿ ತಾನು ರೂಪಳೊಂದಿಗೆ ಲೈಂಗಿಕ‌ಕ್ರಿಯೆ ನಡೆಸುವ ವಿಡಿಯೋ ಆಕೆಗೆ ಗೊತ್ತಿಲ್ಲದ ಹಾಗೆ‌ ವಿಡಿಯೋ ರೆಕಾರ್ಡ್ ಮಾಡಿ ಫೇಸ್ ಬುಕ್ ಖಾತೆಗೆ ಹಾಕಿದ್ದ. ಇದಕ್ಕೆ ರೂಪ‌ ಗಂಡ ಉಮೇಶ್ ರಾಜಾಗೋಪಾಲ ಠಾಣೆಗೆ ತೆರಳಿ ಠಾಣೆಗೆ ದೂರು ನಿಡಿದ್ರು. ಇದ್ರಿಂದ ಪೊಲಿಸರು‌ ಕಿಶೋರ್ ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ರು. ನಂತ್ರ ಆರೋಪಿ‌ ಕಿಶೋರ್ ಹೊರಗೆ ಬಂದು ತನ್ನ ನಾಲ್ಕು ಸಹಚರ ಜೊತೆ ಸೇರಿ‌‌ಕೊಲೆ‌ಮಾಡಿದ್ದಾನೆ. ಇನ್ನು ಇದೀಗ ಪೊಲೀಸರು ನಾಲ್ವರನ್ನ ಬಂಧಿಸಿ‌ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಿಶೋರ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆBody:KN_BNG_01_22_NORTMURDER_BHAVYA_7204498Conclusion:KN_BNG_01_22_NORTMURDER_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.