ETV Bharat / state

ಪ್ರತಿಭಟನಾ ಸ್ಥಳಕ್ಕೆ ಸಚಿವ ನಾಡಗೌಡ: ಚರ್ಚೆಗೆ ಸಿದ್ದ ಎಂದ ಹೆಚ್ಡಿಕೆ, ಬಿಎಸ್​ವೈಗೆ ಸಿಎಂ ಪತ್ರ ಹಸ್ತಾಂತರ

ಬಿಜೆಪಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ವೆಂಕಟರಾವ್ ನಾಡಗೌಡ, ಯಡಿಯೂರಪ್ಪರಿಗೆ ಸಿಎಂ ಕೊಟ್ಟು ಕಳುಹಿಸಿದ ಪತ್ರ ನೀಡಿದರು.

author img

By

Published : Jun 16, 2019, 12:42 PM IST

Updated : Jun 16, 2019, 1:09 PM IST

ಬಿಎಸ್​ವೈಗೆ ಸಿಎಂರ ಪತ್ರ ನೀಡಿದ ಸಚಿವ ನಾಡಗೌಡ

ಬೆಂಗಳೂರು: ಬಿಜೆಪಿ ಅಹೋರಾತ್ರಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ, ಪ್ರತಿಪಕ್ಷ ನಾಯಕ ಯಡಿಯೂರಪ್ಪರಿಗೆ ಸಿಎಂ ಕುಮಾರಸ್ವಾಮಿ ನೀಡಿದ ಪತ್ರವನ್ನು ಹಸ್ತಾಂತರಿಸಿದ್ರು.

ಬಳಿಕ ಮಾತನಾಡಿದ ನಾಡಗೌಡ, ಸರ್ಕಾರದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಸಿಎಂ ದೂರವಾಣಿ ಕರೆ ಮಾಡಿ ಪ್ರತಿಭಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದು, ಅದರಂತೆ ಇಲ್ಲಿಗೆ ಬಂದು ಅವರ ಪತ್ರ ನೀಡಿದ್ದೇನೆ ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಚಿವ ನಾಡಗೌಡ ಭೇಟಿ

ಪತ್ರದಲ್ಲೇನಿದೆ?

ರಾಜ್ಯದಲ್ಲಿ ಬರ ಪರಿಹಾರ ನಿರ್ವಹಣೆ, ರೈತರ ಸಾಲ ಮನ್ನಾ ಯೋಜನೆ ಹಾಗೂ ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಕುರಿತಂತೆ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ.

BJP PROTEST
ಸಿಎಂ ಪತ್ರ

ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ರೈತರ ಸಾಲ ಮನ್ನಾವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಂದಾಲ್​ಗೆ ಭೂಮಿ ಪರಭಾರೆ ವಿಚಾರದ ಪುನಪರಿಶೀಲನೆಗಾಗಿ ಸಂಪುಟ ಉಪಸಮಿತಿ ರಚಿಸಲಾಗಿದೆ. ತಮ್ಮೊಂದಿಗೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ. ತಮ್ಮ ಸಮಯಕ್ಕೆ ಅನುಗುಣವಾಗಿ ಚರ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

Intro:Cm letterBody:KN_BNG_01_16_BJPPROTEST_NADAGOWDAVISIT_SCRIPT_VENKAT_7201951

ಬಿಜೆಪಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ನಾಡಗೌಡ; ಬಿರಸ್ ವೈಗೆ ಸಿಎಂ ಪತ್ರ ನೀಡಿದ ಸಚಿವ

ಬೆಂಗಳೂರು: ಬಿಜೆಪಿ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಸಚಿವ ವೆಂಕಟ್ ರಾವ್ ನಾಡಗೌಡ ಭೇಟಿ ನೀಡಿ, ಪ್ರತಿಪಕ್ಷ ನಾಯಕ ಯಡಿಯೂರಪ್ಪರಿಗೆ ಸಿಎಂರ ಪತ್ರವನ್ನು ನೀಡಿದರು.

ಪತ್ರ ನೀಡಿದ ಬಳಿಕ ಮಾತಾಡಿದ ಅವರು, ಸರ್ಕಾರದ ಪ್ರತಿನಿಧಿಯಾಗಿ ಇಲ್ಲಿಗೆ ಬಂದು ಸಿಎಂರ ಪತ್ರವನ್ನು ನೀಡಿದ್ದೇನೆ. ಸಿಎಂ ದೂರವಾಣಿ ಕರೆ ಮಾಡಿ ಪ್ರತಭಟನಾ ಸ್ಥಳಕ್ಕೆ ತೆರಳಿ ಪತ್ರ ನೀಡುವಂತೆ ಸೂಚಿಸಿದ್ದು, ಅದರಂತೆ ಇಲ್ಲಿಗೆ ಬಂದು ಪತ್ರ ನೀಡಿದ್ದೇನೆ ಎಂದು ಸಚಿವ ವೆಂಕಟ ರಾವ್ ನಾಡಗೌಡ ತಿಳಿಸಿದರು.

ಪತ್ರದ ಮುಖೇನ ಸಿಎಂ, ರಾಜ್ಯದಲ್ಲಿ ಬರ ಪರಿಹಾರ ನಿರ್ವಹಣೆ, ರೈತರ ಸಾಲ ಮನ್ನಾ ಯೋಜನೆ ಹಾಗೂ ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಕುರಿತಂತೆ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ರೈತರ ಸಾಲ ಮನ್ನಾ ವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರದ ಪುನಪರಿಶೀಲನೆಗಾಗಿ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದ್ದಾರೆ.

ತಮ್ಮೊಂದಿಗೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ. ತಮ್ಮ ಸಮಯಕ್ಕೆ ಅನುಗುಣವಾಗಿ ಚರ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.Conclusion:Venkat
Last Updated : Jun 16, 2019, 1:09 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.