ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತದಾರರಲ್ಲಿ ಕಡ್ಡಾಯ ಹಾಗೂ ನೈತಿಕ ಮತದಾನ ಕುರಿತು ಅರಿವು ಮೂಡಿಸಲು ಎಲ್ಲೆಡೆ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಸವರಾಜ್ ಎಂಬವರು ಕೂಡ ವಿಶಿಷ್ಟ ರೀತಿಯ ಪ್ರಯತ್ನ ಮಾಡಿದ್ದಾರೆ.
ಬಸವರಾಜ್ ಗಾಜಿನ ಬಾಟಲ್ಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳು ಹಾಗೂ ಅವರ ಭಾವಚಿತ್ರಗಳ ಫ್ರೇಮ್ಗಳನ್ನು ಅಳವಡಿಸುವ ಮೂಲಕ ಮತದಾನದ ಅರಿವು ಮೂಡಿಸಿದ್ದಾರೆ.
ಇದನ್ನು ರೂಪಿಸಲು ವಾರಕ್ಕೂ ಹೆಚ್ಚು ಸಮಯ ಬೇಕು. ಬಾಟಲ್ ಕಲೆಯ ಮೂಲಕ ಮತದಾನ ಮಾಡಿ ಎಂಬ ಸಂದೇಶ ನೀಡುವ ಸಣ್ಣ ಪ್ರಯತ್ನ ಮಾಡಿದ್ದೇನೆ ಎಂಬುದು ಬಸವರಾಜ್ ಮಾತು.