ETV Bharat / state

ಆಸ್ತಿ ತೆರಿಗೆ ಹೆಚ್ಚಳ ವಿಚಾರ: ಜನರ ವಿರುದ್ಧ ಬಿಬಿಎಂಪಿ ಸೇಡು ತೀರಿಸಿಕೊಳ್ತಿದೆ ಅಂದ್ರು ಪದ್ಮನಾಭ ರೆಡ್ಡಿ

ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ಬಿಜೆಪಿಗೆ ಮತ ಹಾಕಿದ ಜನರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

author img

By

Published : Jun 7, 2019, 3:44 AM IST

ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಬೆಂಗಳೂರು: ನಗರದಲ್ಲಿ ಜನ ಬಿಜೆಪಿಗೆ ವೋಟು ಹಾಕಿ ಗೆಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಆಡಳಿತ ಪಕ್ಷ ಹಾಗೂ ಬಿಬಿಎಂಪಿ ಮುಂದಾಗಿದೆ ಎಂದು ಬಿಬಿಎಂಪಿಯ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಪ್ರಸ್ತಾವನೆಯನ್ನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಮುಂದಿಟ್ಟಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಕೆಎಂಸಿ ನಿಯಮದ ಪ್ರಕಾರ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಅವಕಾಶವಿದೆ. ಆದರೆ ಚುನಾವಣೆ ಪೂರ್ವದಲ್ಲಿ ತೆರಿಗೆ ಹೆಚ್ಚಳ ಮಾಡದೇ ಚುನಾವಣೆ ಮುಗಿದು ಹೀನಾಯ ಸೋಲು ಕಂಡ ಬಳಿಕ ಬಿಬಿಎಂಪಿ ಜನರ ಮೇಲೆ ಹೊರೆ ಹಾಕಲು ಮುಂದಾಗಿದೆ ಎಂದರು. ನಗರದಲ್ಲಿ ಈಗಾಗಲೇ ಜನಜೀವನ ದುಬಾರಿಯಾಗುತ್ತಿದೆ, ವಿದ್ಯುತ್ ಬಿಲ್, ನೀರಿನ ಬಿಲ್ ಕೂಡಾ ಹೆಚ್ಚಳವಾಗಿದೆ. ಆಸ್ತಿತೆರಿಗೆ ಹೆಚ್ಚಳ ಮಾಡಿದ್ರೆ 2015 ರ ಮಾದರಿಯಲ್ಲೇ ಬಿಜೆಪಿ ಬೃಹತ್ ಪ್ರತಿಭಟನೆ ಮಾಡಲಿದೆ ಎಂದು ರೆಡ್ಡಿ ಎಚ್ಚರಿಕೆ ರವಾನಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಗಂಗಾಂಬಿಕೆ ಅವರು, ಈವರೆಗೆ ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿರಬಹುದು. ಕೌನ್ಸಿಲ್​ನಲ್ಲಿ ಚರ್ಚೆಗೆ ಬಂದಾಗ ಗೊತ್ತಾಗಲಿದೆ. ಆದ್ರೆ ಈಗಾಗಲೇ ಹಣಕಾಸು ವರ್ಷ ಅರ್ಧ ಮುಗಿದಿದ್ದು, ಈಗ ಹೆಚ್ಚಳ ಮಾಡುವ ಬಗ್ಗೆ ಗೊಂದಲಗಳು ಉಂಟಾಗಬಹುದು ಎಂದಿದ್ದಾರೆ.

Intro:ಬಿಜೆಪಿಗೆ ಮತ ಹಾಕಿದ ಜನರ ವಿರುದ್ಧ ಬಿಬಿಎಂಪಿ ಸೇಡು ತೀರಿಸಿಕೊಳ್ಳಲು ಮುಂದಾಗಿದೆ- ವಿಪಕ್ಷ ನಾಯಕ ಆರೋಪ

ಬೆಂಗಳೂರು- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿತೆರಿಗೆ ಹೆಚ್ಚಳ ಮಾಡುವ ಬಗ್ಗೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಪ್ರಸ್ತಾವನೆಯನ್ನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಮುಂದಿಟ್ಟಿದ್ದಾರೆ.. ಆದರೆ ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಹೆಚ್ಚಳ ಮಾಡಬಾರದು. ನಗರದಲ್ಲಿ ಜನ ಬಿಜೆಪಿಯನ್ನು ಓಟ್ ಹಾಕಿ ಗೆಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಆಡಳಿತ ಪಕ್ಷ ಮುಂದಾಗಿದೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.
ಕೆಎಂಸಿ ನಿಯಮದ ಪ್ರಕಾರ ಮೂರು ವರ್ಷಕ್ಕೊಮ್ಮೆ ಆಸ್ತಿತೆರಿಗೆ ಹೆಚ್ಚಳ ಮಾಡುವ ಅವಕಾಶವಿದೆ. ಕನಿಷ್ಟ ಶೇಕಡಾ ಹದಿನೈದರಿಂದ ಶೇಕಡಾ ಮೂವತ್ತರಷ್ಟು ಹೆಚ್ಚಳ ಮಾಡಬಹುದು. ಹೀಗಾಗಿ ವಾಣಿಜ್ಯ ಆಸ್ತಿಗಳಿಗೆ ಶೇಕಡಾ ಮೂವತ್ತರಷ್ಟು ಹಾಗೂ ವಸತಿ ಆಸ್ತಿಗಳಿಗೆ ಶೇಕಡಾ 25 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಆಯುಕ್ತರು ಕೌನ್ಸಿಲ್ ಮುಂದಿಟ್ಟಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆ ಈವರೆಗೆ ಚರ್ಚೆಗೆ ಬಂದಿರಲಿಲ್ಲ, ಆದ್ರೆ ಜೂನ್ ತಿಂಗಳ ಮಾಸಿಕ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇದನ್ನು ವಿರೋಧಿಸಿರುವ ಪಾಲಿಕೆ ವಿರೋಧ ಪಕ್ಷ ಬಿಜೆಪಿ, ನಗರದಲ್ಲಿ ಈಗಾಗಲೇ ಜನಜೀವನ ದುಬಾರಿಯಾಗುತ್ತಿದೆ. ವಿದ್ಯುತ್ ಬಿಲ್, ನೀರಿನ ಬಿಲ್ ಕೂಡಾ ಹೆಚ್ಚಳವಾಗಿದೆ. ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ರೆ 2015 ರ ಮಾದರಿಯಲ್ಲೇ ಬಿಜೆಪಿ ಬೃಹತ್ ಪ್ರತಿಭಟನೆ ಮಾಡಲಿದೆ ಎಂದರು.
ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಗಂಗಾಂಬಿಕೆ ಈವರೆಗೆ ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿರಬಹುದು. ಕೌನ್ಸಿಲ್ ನಲ್ಲಿ ಚರ್ಚೆ ಬಂದಾಗ ಗೊತ್ತಾಗಲಿದೆ. ಆದ್ರೆ ಈಗಾಗಲೇ ಹಣಕಾಸು ವರ್ಷ ಅರ್ಧ ಮುಗಿದಿದೆ. ಈಗ ಹೆಚ್ಚಳ ಮಾಡುವ ಬಗ್ಗೆ ಗೊಂದಲಗಳು ಉಂಟಾಗಬಹುದು ಎಂದರು.
ಒಟ್ಟಿನಲ್ಲಿ ಆಸ್ತಿತೆರಿಗೆ ಹೆಚ್ಚಳ ಮಾಡಿ, ಪಾಲಿಕೆಯ ಆದಾಯ ಹೆಚ್ಚಿಸಿಕೊಳ್ಳಲು ಅಧಿಕಾರಿ ವರ್ಗ ಎಷ್ಟೇ ಪ್ರಯತ್ನಪಟ್ಟರೂ, ಆಡಳಿತ ಪಕ್ಷ ಹಾಗೂ ವಿಪಕ್ಷಗಳಿಂದಲೇ ವಿರೋಧ ವ್ಯಕ್ತವಾಗ್ತಿದೆ‌ ಆಸ್ತಿ ತೆರಿಗೆ ಹೆಚ್ಚಳ ಹೊರತು ಪಡಿಸಿ, ನಗರದ ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೋಢೀಕರಣ ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಸೌಮ್ಯಶ್ರೀ.

Body:KN_BNG_01_06_tax_hike_bbmp_script_sowmya_7202707

Conclusion:KN_BNG_01_06_tax_hike_bbmp_script_sowmya_7202707

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.