ETV Bharat / state

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದ ಮಹಿಳಾ ಸಂಘಟನೆಗಳು

author img

By

Published : Jan 8, 2020, 9:37 PM IST

ಪೌರತ್ವ (ತಿದ್ದುಪಡಿ) ವಿರೋಧಿಸಿ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಜರುಗಿತು.

Women's organisation made rally
ಪ್ರತಿಭಟನಾ ರ‍್ಯಾಲಿ ನಡೆಸಿದ ಮಹಿಳಾ ಸಂಘಟನೆಗಳು

ಬಸವಕಲ್ಯಾಣ(ಬೀದರ್‌): ಪೌರತ್ವ ಕಾಯ್ದೆ ವಿರೋಧಿಸಿ ನಗರದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಜರುಗಿತು.

ಇಲ್ಲಿಯ ಕೋಟೆ ಬಳಿ ಜಮಾಯಿಸಿದ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದ ಮಹಿಳಾ ಸಂಘಟನೆಗಳು

ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡ ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ಕೆ. ನೀಲಾ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಸಬ್​ ಕಾ ಸಾಥ್, ಸಬ್ ಕಾ ವಿಕಾಸ್​​ ಎಂದು ಹೇಳಿಕೊಂಡು ಜನ ವಿರೋಧಿ ನೀತಿ ಜಾರಿಗೆ ತರುತ್ತಿದೆ. ಕೋಮು ಸೌಹಾರ್ಧತೆಯಿಂದ ಬಾಳುತ್ತಿರುವ ದೇಶದ ಜನರನ್ನು ಒಡೆಯಲು ಮೋದಿ, ಅಮಿತ್ ಶಾ ಅವರಿಂದ ಸಾಧ್ಯವಿಲ್ಲ. ಆರ್‌ಎಸ್‌ಎಸ್ ಎನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ. ಅದೊಂದು ರಾಷ್ಟ್ರೀಯ ಸರ್ವನಾಶ ಸಮಿತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಾಮಾಜಿಕ ಕಾರ್ಯಕರ್ತೆ ಖಾಲಿದಾ ಬೇಗಂ ಮಾತನಾಡಿ, ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಅಸ್ಥಿತ್ವಕ್ಕೆ ನಡೆಯುತ್ತಿರುವ ಹೋರಾಟವಾಗಿದೆ. ಇದು ಹಿಂದೂ-ಮುಸ್ಲಿಂರ ನಡುವಿನ ಹೋರಾಟವಲ್ಲ. ಬಿಜೆಪಿ ವಿರುದ್ಧದ ಹೋರಾಟವಾಗಿದೆ. ಎನ್‌ಆರ್‌ಸಿ, ಸಿಎಎ ವಾಪಾಸ್ ಪಡೆಯುವವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನಾ ರ‍್ಯಾಲಿಯಲ್ಲಿ ತಾ.ಪಂ. ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್​, ಪ್ರಮುಖರಾದ ಅಂಜುಮ ಅನ್ವರ ಭೋಸ್ಗೆ, ಶಹಿದಾ ಬೇಗಂ, ಶರವತ್, ರುಕ್ಸಾನ ಪರ್ವೀನ್, ಶಹಾಜಹಾನ್ ಮನಿಯಾರ್, ಶಹಾಜಹಾನ್ ಶೇಕ್ ತನ್ವೀರ್ ಅಹ್ಮದ್, ಜವೀರಯಾ ಫರ್ಹಾನ್, ಫಾತಿಮಾ ಅಬ್ದುಲ್ ಗಫಾರ್, ನಾಜೀನ ಸಾಬಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Intro:( ನಮ್ಮ ಸುದ್ದಿ ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿ ಸರ್)

ಎರಡು ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿಯ ಕೋಟೆ ಬಳಿ ಬೃಹತ್ ಪ್ರತಿಭಟನಾ ರ‍್ಯಾಲಿ ಜರಿಗಿತು.
ಮಧ್ಯಾಹ್ನ ೧೨ರಿಂದ ಕೋಟೆ ಬಳಿ ಜಮಾಯಿಸಿದ ಮಹಿಳೆಯರು, ೩ ಗಂಟೆಗಳ ವರೆಗೆ ಕೋಟೆ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ ಪ್ರತಿಭಟನಾ ನಿರತ ಮಹಿಳೆಯರು, ಸಿಎಎ ಮತ್ತು ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿ ವಿರೋಧಿಸಿ ಘೋÃಷಣೆ ಹಾಕುವ ಮೂಲಕ ಅಕ್ರೋಶ ವ್ಯಕ್ತಪಡಿಸಿದರು. ಧಾರ್ಮಾಧಾರಿತವಾಗಿ ದೇಶದ ಜನರನ್ನು ವಿಭಜಿಸುವ ಪೌರತ್ವ ತಿದ್ದುಪಡಿ ಕಾಯ್ದೆ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡ ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ಕೆ. ನೀಲಾ ಮಾತನಾಡಿ, ಸಬಕಾ ಸಾಥ್ ಸಬಕಾ ವಿಕಾಸ ಎಂದು ಹೇಳಿ ಅದಿಕಾರಕ್ಕೆ ಬಂದು ಜನವಿರೋಧಿ ನೀತಿ ಜಾರಿಗೆ ತುರುವ ಜೊತೆಗೆ ದೇಶದಲ್ಲಿ ಧರ್ಮಾಧಾರದಲ್ಲಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಕೋಮು ಸೌಹಾರ್ಧತೆಯಿಂದ ಬಾಳುತ್ತಿರುವ ದೇಶದ ಜನರನ್ನು ಒಡೆಯಲು ಮೋದಿ, ಅಮೀತ್ ಶಾ ಅವರಿಂದ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಎನ್ನುವುದು ರಾಷ್ಟಿçÃಯ ಸ್ವಯಂ ಸೇವಕ ಸಂಘವಲ್ಲ. ಅದೊಂದು ರಾಷ್ಟಿçÃಯ ಸರ್ವಾನಾಶ ಸಮಿತಿಯಾಗಿದೆ, ಬಿಜೆಪಿ ಸರ್ಕಾರದ ಮೂಲಕ ಒತ್ತಾಯ ಪೂರ್ವಕವಾಗಿ ತನ್ನ ಸಿದ್ಧಾಂತವನ್ನು ದೇಶದ ಜನರ ಮೇಲೆ ಹೇರಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಭೀವೃದ್ದಿ ದೃಷ್ಠಿಯಿಂದ ಜಮ್ಮು ಕಾಶ್ಮಿರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ(೩೭೧ ಕಲಂ)ವನ್ನು ಹಿಂಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಬಿಜೆಪಿಯವರಿಗೆ ಅಲ್ಲಿಯ ಅಭಿವೃದ್ದಿ ಬೇಕಾಗಿಲ್ಲ. ಬದಲಾಗಿ ಅಂಬಾನಿ, ಅದಾನಿ ಅವರಂಥವರಿಗೆ ತಮ್ಮ ಉದ್ಯಮಗಳನ್ನು ವಿಸ್ತರಿಸಲು ಅನುಕೂಲ ಕಲ್ಪಿಸುವುದೆ ಬಿಜೆಪಿ ಮೂಲ ಉದೇಶವಾಗಿದೆ ಎಂದು ಆರೋಪಿಸಿದರು.
ಹೈದರಬಾದನ ಸಾಮಾಜಿಕ ಕಾರ್ಯಕರ್ತೆ ಖಾಲಿದಾ ಬೇಗಂ ಮಾತನಾಡಿ, ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಅಸ್ಥಿತ್ವಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಇದು ಹಿಂದು ಮುಸ್ಲಿಮರ ನಡುವಿನ ಹೋರಾಟವಲ್ಲ. ಬಿಜೆಪಿ ವಿರುದ್ಧದ ಹೋರಾಟವಾಗಿದೆ. ಎನ್‌ಆರ್‌ಸಿ, ಸಿಎಎ ವಾಪಾಸ್ ಪಡೆಯುವ ವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವದು ಎಂದರು.
ತಾಪA ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ, ಪ್ರಮುಖರಾದ ಅಂಜುಮ ಅನ್ವರ ಭೋಸ್ಗೆ, ಶಹಿದಾ ಬೇಗಂ, ಶರವತ್, ರುಕ್ಸಾನಾ ಪರ್ವಿನ್, ಶಹಾಜಹಾನ್ ಮನಿಯಾರ್, ಶಹಾಜಹಾನ್ ಶೇಕ್ ತನ್ವೀರ ಅಹ್ಮದ್, ಜವೀರಯಾ ಫರ್ಹಾನ್, ಫಾತಿಮಾ ಅಬ್ದುಲ್ ಗಫಾರ್, ನಾಜೀನ ಸಾಬಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನಗರದ ವಿವಿಧ ಬಡಾವಣೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ರಾಷ್ಟçಪತಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿನೀಡಿದ ತಹಶೀಲ್ದಾರ ಸಾವಿತ್ರಿ ಸಲಗರ್ ಅವರಿಗೆ ಸಲ್ಲಿಸಲಾಯಿತು. ಹಾಯಿಖಾ ಅನ್ವರ ಭೋಸ್ಗೆ ಮನವಿ ಪತ್ರ ಓದಿದರು.
ಮುಂಜಾಗೃತ ಕ್ರಮವಾಗಿ ಗ್ರಾಮದಲ್ಲಿ ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‌ಐ ಸುನೀಲಕುಮಾರ, ಜಯಶ್ರೀ, ಗೌತಮ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.