ಬೀದರ್: ಕಾರಂಜಾ ಜಲಾಶಯದ ಮುಂಭಾಗದ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ ಬಳಿಯ ಕಾರಂಜಾ ಜಲಾಶಯದ ಮುಂಭಾಗದಲ್ಲಿರುವ ಕಾರಂಜಾ ಪಾರ್ಕ್ ಹತ್ತಿರದ ಕಾಲುವೆಯಲ್ಲಿ ನಾಗರಾಜ ಬಾಬುರಾವ್(16) ಹಾಗೂ ಕಾಶಿನಾಥ ಅಶೋಕ(18) ಎಂಬ ಯುವಕರು ಕಾಲು ಜಾರಿ ಬಿದ್ದಿದ್ದಾರೆ.
ಈಜಾಡಲು ಬಾರದೆ ಇಬ್ಬರು ಯುವಕರು ನೀರಿನಲ್ಲಿ ಕೊನೆಯುಸಿರೆಳೆದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಧನ್ನೂರಾ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.