ಬೀದರ್: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಖರೀದಿಸಲು ಬರುವ ಗ್ರಾಹಕರು ಈರುಳ್ಳಿ ಕಂಡ್ರೆನೇ ಕಣ್ಣಲ್ಲಿ ನೀರು ಬರುವಂತಹ ಸ್ಥಿತಿ ರಾಜ್ಯಾದ್ಯಂತ ನಿರ್ಮಾಣವಾಗಿದೆ.
ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೇಳಿಯೇ ಗ್ರಾಹಕರು ದಂಗಾಗಿ ಹೋಗ್ತಿದ್ದಾರೆ. 100 ರೂಪಾಯಿ ಗಡಿ ದಾಟಿದ ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಖರೀದಿ ಮಾಡುವುದೇ ಕಡಿಮೆ ಮಾಡಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಉತ್ಪಾದನೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದ್ದು, ನೆರೆರಾಜ್ಯಗಳಿಂದ ಬರುತ್ತಿರುವ ಈರುಳ್ಳಿಗೆ ಜಾಸ್ತಿ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯ ಗ್ರಾಹಕರದ್ದಾಗಿದೆ.
ಕೆಲ ದಿನಗಳ ಹಿಂದೆ ಕೆಜಿಗೆ 10 ರೂಪಾಯಿ ಇದ್ದ ಈರುಳ್ಳಿ ಒಮ್ಮೆಲೆ 100 ರೂಪಾಯಿಗೆ ಏರಿದ್ದು, ಬರೋಬ್ಬರಿ 10 ಪಟ್ಟು ಹೆಚ್ಚಿನ ಹಣ ಕೊಟ್ಟು ಈರುಳ್ಳಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.