ಬಸವಕಲ್ಯಾಣ: ನಿಯಂತ್ರಣ ತಪ್ಪಿದ ಬೈಕ್ ಸೇತುವೆ ಕೆಳಗೆ ಬಿದ್ದ ಪರಿಣಾಮ ಬೈಕ್ನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಜೋಗೆವಾಡಿ ಗ್ರಾಮದ ಸಮೀಪ ಜರುಗಿದೆ.
ನಗರದ ಚಿತಕೋಟಾ ಗ್ರಾಮದ ಸುನೀಲ ಜಾಧವ (23) ಮೃತ ಯುವಕನಾಗಿದ್ದಾನೆ. ಶನಿವಾರ ರಾತ್ರಿ ಜೋಗೆವಾಡಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಸೇತುವೆ ಬಳಿಯಿರುವ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ.
ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಬಸವಲಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.