ETV Bharat / state

ಪಶು ಆಸ್ಪತ್ರೆ ಹಾಗೂ ಕಚೇರಿಗಳಿಗೆ ದಿಢೀರ್​​ ಭೇಟಿ:  ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡ  ಸಚಿವ ಚವ್ಹಾಣ!

ಇಂದು ನಗರದ ವಿವಿಧ ಪಶು ಆಸ್ಪತ್ರೆ ಹಾಗೂ ಕಚೇರಿಗಳಿಗೆ ದಿಢೀರ್​ ಭೇಟಿ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಅಶಿಸ್ತನ್ನು ನೋಡಿ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

Minister Prabhu Chavan,ಪ್ರಭು ಚವ್ಹಾಣ
author img

By

Published : Sep 9, 2019, 2:29 PM IST

ಬೀದರ್: ಇಂದು ನಗರದ ವಿವಿಧ ಪಶು ಆಸ್ಪತ್ರೆ ಹಾಗೂ ಕಚೇರಿಗಳಿಗೆ ದಿಢೀರನೆ ಭೇಟಿ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಅಶಿಸ್ತನ್ನು ನೋಡಿ ಕೆಂಡಾಮಂಡಲರಾದರು. ಇನ್ನೂ ಕಚೇರಿ ಸಮಯದಲ್ಲಿ ಚಕ್ಕರ್ ಹಾಕಿದ ಸಿಬ್ಬಂದಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡದೇ ಬೇಜವಾಬ್ದಾರಿ ವಹಿಸಿದ ಸಿಬ್ಬಂದಿಗಳಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಿದರು.

ಪಶು ಆಸ್ಪತ್ರೆ ಹಾಗೂ ಕಚೇರಿಗಳಿಗೆ ದಿಢೀರನೆ ಭೇಟಿ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ

ಸರ್ಕಾರ ನೀಡಿದ ಹವಾ ನಿಯಂತ್ರಿತ ಕಾರನ್ನು ಬಿಟ್ಟು ವಾರ್ತಾ ಇಲಾಖೆ ವಾಹನ ಏರಿದ ಸಚಿವರು ನೇರವಾಗಿ ಉಪ ನಿರ್ದೇಶಕರ ಕಚೇರಿಗೆ ಆಗಮಿಸಿದ್ದರು. ಈ ವೇಳೆ, ಕಚೇರಿ ಹೊರ ಬಾಗಲಲ್ಲಿ ಸಚಿವರ ಮುಂದೆ ಬಾಯಿ ತುಂಬಾ ಗುಟ್ಕಾ ತುಂಬಿಕೊಂಡು ಸ್ವಾಗತಿಸಿದ್ದ ಎನ್. ಗಾಂಧಿ ಎಂಬ ಸಿಬ್ಬಂದಿ ಸಚಿವರು ಮಾತನಾಡುವಾಗ ಬಾಯಿಯಿಂದ ಗುಟ್ಕಾ ಹೊರ ಬಂದು ಅಶಿಸ್ತು ಪ್ರದರ್ಶನ ಮಾಡಿದ್ರು. ಏನ್ರೀ ಗುಟ್ಕಾ ಬಾಯಲ್ಲಿ ಇಟ್ಟಕೊಂಡು ಸಚಿವರ ಮುಂದೆ ಬರ್ತಿರಾ ನಿಮಗೇನಾದ್ರು ಇದೆಯಾ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಕಚೇರಿ ಒಳಗೆ ಪ್ರವೇಶ ಮಾಡ್ತಿದ್ದಂತೆ ಮತ್ತೊಬ್ಬ ಬಾಬು ಎಂಬ ಸಿಬ್ಬಂದಿ ಕಂಠಪೂರ್ತಿ ಕುಡಿದು ಮಧ್ಯದ ನಶೆಯಲ್ಲಿ ತೆಲಾಡುತ್ತ ಇರುವುದನ್ನು ಕಂಡ ಸಚಿವರು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದ್ದಾರೆ.

ನಂತರ ನಗರದ ಜಿಲ್ಲಾ ಪಂಚಾಯತ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಗೆ ಭೇಟಿ ಕೊಟ್ಟಾಗ ಸಚಿವರು ಅಸ್ವಚ್ಛತೆಯನ್ನು ಕಂಡು ಅಸಮಾಧಾನ ಹೊರ ಹಾಕಿದರು. ಇನ್ನೂ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧ ಕಂಡು ದಂಗಾಗಿ ಹೋದ ಸಚಿವರು, ಇಂಥಹ ಔಷಧ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿರುವುದನ್ನು ಕಂಡು ವೈಸ್ ಚಾನ್ಸಲರ್​​ಗೆ ಫೋನ್​ನಲ್ಲೆ ತರಾಟೆ ತೆಗೆದುಕೊಂಡರು. ಈ ಅವ್ಯವಸ್ಥೆ ಕುರಿತು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಮಗ್ರ ವರದಿ ಸಲ್ಲಿಸುವುದಾಗಿ ಸಚಿವ ಪ್ರಭು ಚವ್ಹಾಣ ಹೇಳಿದರು.

Intro:ಗುಠಕಾ ತಿಂದ ಗಾಂಧಿ, ಸರಾಯಿ ಕುಡಿದ ಬಾಬು- ಸಸ್ಪೇಂಡ್ ಮಾಡಿದ ಸಚಿವ...!

ಬೀದರ್:
ಪಶು ಪಾಲನೆ, ಪಶು ವೈಧ್ಯಕೀಯ ಇಲಾಖೆಯ ಕಚೇರಿಯಲ್ಲಿ ಗುಠಕಾ ತಿಂದ ಎನ್.ಗಾಂಧಿ, ಸರಾಯಿ ಕುಡಿದ ಬಾಬು ಎಂಬಾತರನ್ನು ಸಸ್ಪೇಂಡ್ ಮಾಡುವಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಸೂಚನೆ ನೀಡಿದ್ದಾರೆ.

ನಗರದ ವಿವಿಧ ಪಶು ಆಸ್ಪತ್ರೆ ಹಾಗೂ ಕಚೇರಿಗಳಿಗೆ ದೀಢಿರನೆ ಭೇಟಿ ನೀಡಿದ ಸಚಿವರು. ಇಲಾಖೆಯಲ್ಲಿ ದುರಾವಸ್ಥೆ ಹಾಗೂ ಅಧಿಕಾರಿಗಳ ಅಶಿಸ್ತನ್ನು ನೋಡಿ ಕೆಂಡಾಮಂಡಲರಾದ ಸಚಿವ ಪ್ರಭು ಚವ್ಹಾಣ ಕಚೇರಿ ಸಮಯದಲ್ಲಿ ಚಕ್ಕರ್ ಹಾಕಿದ ಸಿಬ್ಬಂಧಿಗಳು, ಹಾಜರಿ ಪುಸ್ತಕದಲ್ಲಿ ಸಹಿ ಮಾಡದೆ ಬೇಜವಾಬ್ದಾರಿ ವಹಿಸಿದ ಸಿಬ್ಬಂಧಿಗಳಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಿದರು.

ಸರ್ಕಾರ ನೀಡಿದ ಹವಾ ನಿಯಂತ್ರಿತ ಕಾರ್ ಬಿಟ್ಟು ವಾರ್ತಾ ಇಲಾಖೆ ವಾಹನ ಎರಿದ ಸಚಿವ ಚವ್ಹಾಣ ನೇರವಾಗಿ ಉಪ ನಿರ್ದೇಶಕರ ಕಚೇರಿ ಗೆ ಆಗಮಿಸಿದರು. ಈ ವೇಳೆಯಲ್ಲಿ ಕಚೇರಿ ಹೊರ ಬಾಗಿಲಿನಲ್ಲಿ ಸಚಿವರ ಮುಂದೆ ಬಾಯಿ ತುಂಬ ಗುಠಕಾ ತುಂಬಕೊಂಡು ಸ್ವಾಗತಿಸಿದ್ದೆ. ಎನ್ ಗಾಂಧಿ ಎಂಬ ಸಿಬ್ಬಂಧಿ. ಸಚಿವರು ಮಾತನಾಡುವಾಗ ಬಾಯಿಯಿಂದ ಗುಠಕಾ ಹೊರ ಬಂದು ಅಶಿಸ್ತು ಪ್ರದರ್ಶನ ಮಾಡಿದ್ರು. ಎನ್ರಿ ಗುಠಕಾ ಬಾಯಲ್ಲಿ ಇಟ್ಟಕೊಂಡು ಸಚಿವರ ಮುಂದೆ ಬರ್ತಿರಾ ನಿಮಗೇನಾದ್ರು ಇದೆಯಾ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಕಚೇರಿ ಒಳಗೆ ಪ್ರವೇಶ ಮಾಡ್ತಿದ್ದಂತೆ ಮತ್ತೊಬ್ಬ ಬಾಬು ಎಂಬ ಸಿಬ್ಬಂಧಿ ಕಂಠಪೂರ್ತಿ ಮಧ್ಯದ ನಶೆಯಲ್ಲಿ ತೆಲಾಡುತ್ತ ಇರುವುದನ್ನು ಕಂಡ ಸಚಿವರು ತರಾಟೆಗೆ ತೆಗೆದುಕೊಂಡರು.

ನಂತರ ನಗರದ ಜಿಲ್ಲಾ ಪಂಚಾಯತ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಗೆ ಭೇಟಿ ಕೊಟ್ಟಾಗ ಸಚಿವರು ಸ್ವಚ್ಚತೆಯನ್ನು ಕಂಡು ಬೇರಗಾದ್ರು ಕಚೇರಿಯ ಮೂಲೆಯಲ್ಲಿ ತುಂಬಿಕೊಂಡ ಕಸವನ್ನು ಕೈಯಿಂದಲೆ ಹೊರ ಹಾಕಿ ಅಸಮಾಧಾನ ಹೊರ ಹಾಕಿದರು.

ಅಲ್ಲದೆ ನಗರದ ಗಾಂಧಿ ಗಂಜನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಅವಧಿ ಮುಗಿದ ಔಷಧಿ ಕಂಡು ದಂಗಾಗಿ ಹೊದ್ರು. ಇಂಥ ಔಷಧಿಯನ್ನೆ ಇಟ್ಟಕೊಂಡು ಪಶು ವೈಧ್ಯರು ಚಿಕಿತ್ಸೆ ನೀಡ್ತಿರುವುದನ್ನು ಕಂಡು ವೈಸ್ ಚಾನ್ಸಲರ್ ಗೆ ಫೋನ್ ನಲ್ಲೆ ತರಾಟೆಗೆ ತೆಗೆದುಕೊಂಡು ಈ ಅವ್ಯವಸ್ಥೆ ಕುರಿತು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಮಗ್ರ ವರದಿ ಸಲ್ಲಿಸುವುದಾಗಿ ಸಚಿವ ಪ್ರಭು ಚವ್ಹಾಣ ಹೇಳಿದರು.

ಬೈಟ್-೦೧: ಪ್ರಭು ಚವ್ಹಾಣ- ಸಚಿವ
--------Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.