ಬೀದರ್: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಮತಕ್ಕಾಗಿ ಹಣದ ಆಮಿಷ ವೊಡ್ಡಲು ಹೊದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಬಿಜೆಪಿ ಪಕ್ಷದ ಅಭ್ಯರ್ಥಿ ಶರಣು ಸಲಗರ ಅವರಿಗೆ ಮತ ನೀಡಲು ಹಣ ಹಂಚುತ್ತಿದ್ದ ಎಂದು ಅಲ್ಲಿದ್ದವರು ಆರೋಪಿಸಿದ್ದಾರೆ. ವ್ಯಕ್ತಿಯೊಬ್ಬ ಬಸವಕಲ್ಯಾಣ ನಗರದ ತ್ರಿಪುರಾಂತ ಬಡಾವಣೆಯಲ್ಲಿ ಸಂಜೆ ಬಿಜೆಪಿಗೆ ಮತ ನೀಡುವಂತೆ 500 ಮುಖ ಬೆಲೆಯ ನೋಟುಗಳು ಹಂಚುತ್ತಿದ್ದ ಎಂದು ಮತದಾರರು ದೂರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅವನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನಾ ಸ್ಥಳದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕೂಡ ಇದ್ದರು ಎಂದು ಹೇಳಲಾಗಿದೆ.