ಬಸವಕಲ್ಯಾಣ: ಮಾರಕ ಕೊರೊನಾ ತಡೆಗಟ್ಟುವ ಸಲುವಾಗಿ ಶುಕ್ರವಾರದ ನಮಾಜ್‌ಗೆ ಯಾರೂ ಕೂಡಾ ಮಸೀದಿಗೆ ಆಗಮಿಸದೆ ತಮ್ಮ ತಮ್ಮ ಮನೆಗಳಲ್ಲಿಯೇ ಕುಳಿತು ಪ್ರಾರ್ಥನೆ ಸಲ್ಲಿಸಬೇಕು ಎಂದು ನಗರದ ಧಾರಾಗಿರಿ ಮಸಿದ್-ಇ-ಮಹ್ಮದಿಯಾ ಮೌಲಾನಾ ಅಬ್ದುಲ್ ಸಲಾಮ್ ಖಾಸ್ಮಿ ಮನವಿ ಮಾಡಿದ್ದಾರೆ.
ಮುಸ್ಲಿಂ ಧರ್ಮದವರು ಪ್ರತಿ ಶುಕ್ರವಾರದಂದು ಮಸೀದಿಯಲ್ಲಿ ಸಾಮೂಹಿಕ ಪವಿತ್ರ ನಮಾಜ್ ಸಲ್ಲಿಸುತ್ತಾರೆ. ಆದರೆ, ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಸಾಮೂಹಿಕ ನಮಾಜ್ ರದ್ದುಗೊಳಿಸಲಾಗಿದೆ. ನಮಾಜ್ ಸಲ್ಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕಾಗಿ ಅಲ್ಲಾಹುನಲ್ಲಿ ಪ್ರಾರ್ಥಿಸಬೇಕು. ಮಸೀದಿ ಕಮಿಟಿಯಿಂದ ತಗೆದುಕೊಳ್ಳಲಾದ ನಿರ್ಧಾರಕ್ಕೆ ಬದ್ಧರಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.