ETV Bharat / state

ಶರಣ ಕಾಯಕ ಭೂಮಿಯಲ್ಲಿ 'ಕಲ್ಯಾಣ ಕರ್ನಾಟಕ' ಮಹೋತ್ಸವ

ಹೈದ್ರಾಬಾದ್​ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ' ಎಂದು ಮರು ನಾಮಕರಣ ಮಾಡಿದ ಸರ್ಕಾರದ ಕ್ರಮ ಸ್ವಾಗತಿಸಿ, ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.

ಶರಣರ ಕಾಯಕ ಭೂಮಿಯಲ್ಲಿ ಕಲ್ಯಾಣ ಕರ್ನಾಟಕ ವಿಜಯೋತ್ಸವ
author img

By

Published : Sep 17, 2019, 9:52 PM IST

ಬಸವಕಲ್ಯಾಣ: ಹೈದ್ರಾಬಾದ್​ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ'ವೆಂದು ನಾಮಕರಣ ಮಾಡಿದ ಸರ್ಕಾರದ ಕ್ರಮ ಸ್ವಾಗತಿಸಿ, ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.

ಶರಣರ ಕಾಯಕ ಭೂಮಿಯಲ್ಲಿ ಕಲ್ಯಾಣ ಕರ್ನಾಟಕ ವಿಜಯೋತ್ಸವ

ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕರಾಗಿರುವ ಮಹಾರಾಷ್ಟದ ನಿರಗೂಡಿಯ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನೇತೃತ್ವದಲ್ಲಿ ನಗರದಲ್ಲಿ ಭವ್ಯ ಮೆರವಣಿಗೆ ಜರುಗಿತು.

ಇಲ್ಲಿಯ ಸಸ್ತಾಪೂರ ಬಂಗ್ಲಾದಿಂದ ನಗರದ ರಥ ಮೈದಾನದವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆದ ಮೆರವಣಿಗೆಯಲ್ಲಿ ನಗರ ಸೇರಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಆಗಮಿಸಿದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡರು. ಸುಮಾರು 50ಕ್ಕೂ ಅಧಿಕ ರೀತಿಯ ವಾಹನಗಳಲ್ಲಿ ಭಾರತ ಮಾತೆ, ಗುರು ಬಸವಣ್ಣ, ಅಲ್ಲಮ ಪ್ರಭುದೇವರು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವರು ಸೇರಿದಂತೆ 12ನೇ ಶತಮಾತದಲ್ಲಿ ವಚನ ಚಳುವಳಿ ನಡೆಸಿದ ಶರಣರ ಭಾವಚಿತ್ರಗಳನ್ನಿಟ್ಟು ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ನೇತೃತ್ವವಹಿಸಿದ ಶ್ರೀ ಮಲ್ಲಿನಾಥ ಮಹಾರಾಜರು ತಾವೇ ಸ್ವತಃ ವಾಹನ ಚಲಾಯಿಸುತ್ತಾ ದಾರಿಯಲ್ಲಿ ಬರುವ ಭಕ್ತರಿಗೆ ದರ್ಶನ ನೀಡುತಿದ್ದರು. ಮೆರವಣಿಗೆಯುದ್ದಕ್ಕೂ ಸ್ಥಳೀಯ ಶಾಸಕ ಬಿ.ನಾರಾಯಣರಾವ್​ ಶ್ರೀಗಳ ಪಕ್ಕದಲಿಯೇ ಕುಳಿತು ಗಮನ ಸೆಳೆದರು. ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಡೆದ ಮೆರವಣಿಗೆ ನಂತರ ರಥ ಮೈದಾನದಲ್ಲಿ ಸರ್ವಧರ್ಮ ಸಮಭಾವ ಕಾರ್ಯಕ್ರಮದ ಮೂಲಕ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಸಾಮಾಜಿಕ ಹೋರಾಟಗಾರರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಶಾಸಕ ಬಿ.ನಾರಾಯಣರಾವ್​ ಮಾತನಾಡಿ, 12ನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ಸಮಾನತೆಗಾಗಿ ನಡೆಸಿದ ಚಳುವಳಿ ಜಗತ್ತಿನ ಯಾವ ಮೂಲೆಯಲ್ಲೂ ನಡೆದಿಲ್ಲ. 770 ಜನ ಶರಣರನ್ನು ಕಟ್ಟಿಕೊಂಡು ಬಸವಣ್ಣ ಕಲ್ಯಾಣ ರಾಜ್ಯ ಕಟ್ಟಬೇಕೆಂದು ಹೋರಾಟ ಮಾಡಿದ್ದರು. ಅನುಭವ ಮಂಟಪದ ಮೂಲಕ ಶರಣರು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಪ್ರಜಾ ಪ್ರಭುತ್ವದ ಪರಿಕಲ್ಪನೆ ನೀಡಿದ್ದಾರೆ. ಹೈದ್ರಾಬಾದ್​ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವದರಿಂದ ಶರಣರ ಆಶಯ ಇಂದು ಸಾಕಾರವಾದಂತಾಗಿದೆ ಎಂದರು.

Intro:
ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೧೭_೧
ಶರಣರ ನಾಡು ಬಸವಕಲ್ಯಾಣದಲ್ಲಿ ಶ್ರಿÃ ಹವಾ ಮಲ್ಲಿನಾಥ ಮಹಾರಾಜ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ವಿಜಯೋತ್ಸವ ಆಚರಣೆ ನಿಮಿತ್ತ ಬಸವಾದಿ ಶರಣರ ಭಾವ ಚಿತ್ರಗಳೊಂದಿಗೆ ನಗರದಲ್ಲಿ ನಡೆದ ಭವ್ಯ ಮೆರವಣಿಗೆ

ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೧೭_೨
ಕಲ್ಯಾಣ ಕರ್ನಾಟಕ ವಿಜಯೋತ್ಸವ ಮೆರವಣಿಗೆ ಮಧ್ಯದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿರುವ ಶ್ರಿÃ ಹವಾ ಮಲ್ಲಿನಾಥ ಮಹಾರಾಜರು. ಮೆರವಣಿಗೆಯಲ್ಲಿ ಶ್ರಿÃಗಳಿಗೆ ಶಾಸಕ ಬಿ.ನಾರಾಯಣರಾವ ಸಾಥ್.

(ಬೈಟ್)
ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೧೭_೩
ಮೆರವಣಿಗೆ ಮಧ್ಯೆ ಈ ಟಿವಿ ಭಾರತದೊಂದಿಗೆ ಮಾತನಾಡಿದ ಸ್ಥಳೀಯ ಶಾಸಕ ಬಿ.ನಾರಾಯಣರಾವ

ಶರಣರ ಕಾಯಕ ಭೂಮಿಯಲ್ಲಿ
ಕಲ್ಯಾಣ ಕರ್ನಾಟಕ ವಿಜಯೋತ್ಸವ

ಬಸವಕಲ್ಯಾಣ: ಹೈದ್ರಾಬಾದ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ ಸರ್ಕಾರದ ಕ್ರಮ ಸ್ವಾಗತಿಸಿ, ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕರು ಆಗಿರುವ ಮಹಾರಾಷ್ಟçದ ನಿರಗೂಡಿಯ ಪೂಜ್ಯ ಶ್ರಿÃ ಹವಾ ಮಲ್ಲಿನಾಥ ಮಹಾರಜ ಅವರ ನೇತೃತ್ವದಲ್ಲಿ ನಗರದಲ್ಲಿ ಭವ್ಯ ಮೆರವಣಿಗೆ ಜರುಗಿತು. ಇಲ್ಲಿಯ ಸಸ್ತಾಪೂರ ಬಂಗ್ಲಾದಿಂದ ನಗರದ ರಥ ಮೈದಾನದವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆದ ಮೆರವಣಿಗೆಯಲ್ಲಿ ನಗರ ಸೇರಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟç, ಆಂದ್ರ, ತೆಲಂಗಾಣದಿಂದ ಆಗಮಿಸಿದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸುಮಾರು ೫೦ಕ್ಕೂ ಅಧಿಕ ತೆರದ ವಾಹನಗಳಲ್ಲಿ ಭಾರತ ಮಾತೆ, ಗುರು ಬಸವಣ್ಣ, ಅಲ್ಲಮ ಪ್ರಭುದೇವರು, ಅಕ್ಕ ಮಹಾದೇವಿ, ಮಡಿವಾಳ ಮಾಚಿದೇವರು ಸೇರಿದಂತೆ ೧೨ನೇ ಶತಮಾತದಲ್ಲಿ ವಚನ ಚಳುವಳಿ ನಡೆಸಿದ ಶರಣರ ಭಾವಚಿತ್ರಗಳನ್ನು ಇಟ್ಟು ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನೇತೃತ್ವ ವಹಿಸಿದ ಶ್ರಿÃ ಮಲ್ಲಿನಾಥ ಮಹಾರಾಜರು ತಾವೇ ಸ್ವತಃ ವಾಹನ ಚಲಾಯಿಸುತ್ತ ದಾರಿಯಲ್ಲಿ ಬರುವ ಭಕ್ತರಿಗೆ ದರ್ಶನ ನೀಡುತಿದ್ದರು. ಮೆರವಣಿಗೆಯುದ್ದಕ್ಕೂ ಸ್ಥಳೀಯ ಶಾಸಕ ಬಿ.ನಾರಾಯಣರಾವ ಶ್ರಿÃಗಳ ಪಕ್ಕದಲಿಯೇ ಕುಳಿತು ಸಾಥ್ ನೀಡಿದರು. ಸುಮಾರು ೬ಗಂಟೆಗಳಿಗೂ ಅಧಿಕ ಕಾಲ ಸುಧಿರ್ಘ ಕಾಲ ನಡೆದ ಮೆರವಣಿಗೆ ನಂತರ ರಥ ಮೈದಾನದಲ್ಲಿ ಸರ್ವಧರ್ಮ ಸಮಭಾವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರರು, ಮಾಜಿ ಸೈನಿಕರು, ಸಾಮಾಜಿಕ ಹೋರಾಟಗಾರರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ನನಸಾಯಿತು ಬಸವಣ್ಣನ ಕನಸು: ಶಾಸಕ ಬಿ. ನಾರಾಯಣರಾವ

ಶಾಸಕ ಬಿ.ನಾರಾಯಣರಾವ ಮಾತನಾಡಿ, ೧೨ನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ಸಮಾನತೆಗಾಗಿ ಶರಣರು ನಡೆಸಿದ ಚಳುವಳಿ ಜಗತ್ತಿನ ಯಾವ ಮೂಲೆಯಲ್ಲು ನಡೆದಿಲ್ಲ. ೭೭೦ ಜನ ಶರಣರನ್ನು ಕಟ್ಟಿಕೊಂಡು ಬಸವಣ್ಣನವರು ಕಲ್ಯಾಣ ರಾಜ್ಯ ಕಟ್ಟಬೇಕು ಎಂದು ಹೋರಾಟ ಮಾಡಿದ್ದರು. ಅನುಭವ ಮಂಟಪದ ಮೂಲಕ ಶರಣರು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಪ್ರಜಾ ಪ್ರಭುತ್ವದ ಪರಿಕಲ್ಪನೆ ನೀಡಿದ್ದಾರೆ. ಹೈದ್ರಾಬಾದ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವದರಿಂದ ಶರಣರ ಆಶಯ ಇಂದು ಸಾಕಾರವಾದಂತಾಗಿದೆ. ಬಸವಾದಿ ಶರಣರ ನಾಡಿನಲ್ಲಿ ಶ್ರಿÃ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟ ವಿಜಯೋತ್ಸವ ಆಚರಿಸಲಾಗುತ್ತಿದೆ. ನಾಡ ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಬಣ್ಣಿಸಿದರು.

Body:UDAYAKUMAR MuleConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.