ETV Bharat / state

ಸಿಎಎ ವಿರೋಧಿ ಸಮಾವೇಶ ರದ್ದುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯ - ಬಸವಕಲ್ಯಾಣ ಲೆಟೆಸ್ಟ್ ನ್ಯೂಸ್​

ಬಸವಕಲ್ಯಾಣದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿ ವಿರೋಧಿಸಿ ರ‍್ಯಾಲಿ ಹಾಗೂ ಸಭೆಯನ್ನು ಕೆಲ ಸಂಘಟನೆಗಳು ಹಮ್ಮಿಕೊಂಡಿವೆ. ಇವುಗಳನ್ನು ರದ್ದು ಗೊಳಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ತಹಶೀಲ್ದಾರ್​ಗೆ ಮನವಿ ಪತ್ರ ಸಲ್ಲಿಸಿವೆ.

ಸಿಎಎ ವಿರೋಧಿ ಸಮಾವೇಶ ರದ್ದುಗೊಳಿಸಲು ಹಿಂದೂ ಸಂಘಟನೆ ಒತ್ತಾಯ
Hindu organization request to cancel of anti-CAA convention
author img

By

Published : Feb 23, 2020, 6:03 AM IST

ಬಸವಕಲ್ಯಾಣ: ಸಿಎಎ ಮತ್ತು ಎನ್‌ಆರ್‌ಸಿ ಜಾರಿ ವಿರೋಧಿಸಿ ಥೇರ ಮೈದಾನದಲ್ಲಿ ಆಯೋಜಿಸಿರುವ ರ‍್ಯಾಲಿ ಹಾಗೂ ಸಭೆಯನ್ನು ರದ್ದುಗೊಳಿಸಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಸಮಾವೇಶ ಆಯೋಜನೆ ಖಂಡಿಸಿ ಇಲ್ಲಿಯ ತಹಶೀಲ್ದಾರ್​ ಕಚೇರಿಗೆ ತೆರಳಿದ ಪ್ರಮುಖರು, ಮನವಿ ಪತ್ರವನ್ನು ಉಪ ತಹಶೀಲ್ದಾರ್​ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಿದರು. ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾಗಿರುವ ನಗರದಲ್ಲಿ ಕೋಮು ಸೌಹಾರ್ದತೆ ಕದಡುವ ಉದ್ದೇಶದಿಂದ ಕೆಲವು ಸಂಘಟನೆಗಳು ರ‍್ಯಾಲಿ ಹಾಗೂ ಸಭೆಯನ್ನು ಆಯೋಜಿಸಿವೆ. ಇದನ್ನು ಹಿಂದೂಪರ ಸಂಘಟನೆಗಳು ಉಗ್ರವಾಗಿ ಖಂಡಿಸುತ್ತವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಿಎಎ ವಿಚಾರವನ್ನು ಮುಂದಿಟ್ಟುಕೊಂಡು ವಾಸ್ತಾವಾಂಶವನ್ನು ಮರೆಮಾಚಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಆರ್ಯ ಸಮಾಜ ಅಧ್ಯಕ್ಷ ನಾರಾಯಣ ಬುನ್ನಾ, ಪ್ರಮುಖರಾದ ಡಾ. ಬಸವರಾಜ ಸ್ವಾಮಿ, ಭಾನುಪ್ರಸಾದ ಪಾಂಡೆ, ಶಿವಾಜಿರಾವ ಜಗತಾಪ, ಡಾ. ಲಕ್ಷ್ಮಣರಾವ್ ಮಹೀಂದ್ರಕರ, ಉಮೇಶ ಶೀಲವಂತ, ರಾಜಕುಮಾರ ಕನಶೇಟ್ಟೆ, ಶ್ರೀಶೈಲ ವಾತಡೆ, ಮಲ್ಲಿನಾಥ ಮಂಠಾಳೆ ಸೇರಿದಂತೆ ಪ್ರಮುಖರು ಉಪಸ್ಥಿತರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.