ETV Bharat / state

ಬೀದರ್​ನಲ್ಲಿ ಆಲಿಕಲ್ಲು ಸಹಿತ ಸುರಿದ ಔಖಲಿ ಮಳೆ.. ಜನಜೀವನ ಅಸ್ತವ್ಯಸ್ತ

author img

By

Published : Mar 19, 2023, 5:01 PM IST

ಬೀದರ್​ ಜಿಲ್ಲೆಯಲ್ಲಿ ಔಖಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಬೀದರ್​ನಲ್ಲಿ ವಿಪರೀತ ಆಲಿಕಲ್ಲು ಮಳೆ
ಬೀದರ್​ನಲ್ಲಿ ವಿಪರೀತ ಆಲಿಕಲ್ಲು ಮಳೆ
ಬೀದರ್​ನಲ್ಲಿ ಆಲಿಕಲ್ಲು ಸಹಿತ ಸುರಿದ ಔಖಳಿ ಮಳೆ

ಬೀದರ್ : ಕಳೆದ ಮೂರು ದಿನದಿಂದ ಜಿಲ್ಲಾದ್ಯಂತ ಭಾರಿ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಶನಿವಾರ ಬಿದ್ದ ಔಖಲಿ ಮಳೆಯಿಂದ ಬಿಳಿಜೋಳ, ತರಕಾರಿ ಸೇರಿದಂತೆ ಇತರ ಬೆಳೆಗಳಿಗೆ ಪೆಟ್ಟು ಬಿದ್ದಿದ್ದು, ಗಡಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಬಿರುಗಾಳಿ ಜತೆಗೆ ಸುರಿದ ವ್ಯಾಪಕ ಮಳೆಗೆ ರಾಶಿ ಹಂತಕ್ಕೆ ಬಂದ ಜೋಳ ಮತ್ತು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವಿಗೆ ಹೊಡೆತ ಬಿದ್ದಿದೆ.

ಆಲಿಕಲ್ಲು ಮಳೆ ಹೊಡೆತಕ್ಕೆ ಬೆಳೆಗಾರರು ಕಂಗಾಲು: ಕೆಲವೆಡೆ ಗಾಳಿಯ ರಭಸಕ್ಕೆ ಮರಗಳು, ತಗಡಿನ ಶೀಟ್‍ಗಳು ಗಾಳಿಗೆ ಹಾರಿಹೋಗಿವೆ. ಬಿರುಸಿನಿಂದ ಸುರಿದ ಮಳೆಗೆ ನಗರದ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಈ ವರ್ಷ ಮಾವಿನ ಹೂವು ಉತ್ತಮವಾಗಿ ಫಸಲು ಬಿಟ್ಟಿತ್ತು. ಆದರೆ ಇದೀಗ ಬಿದ್ದ ಆಲಿಕಲ್ಲು ಮಳೆಯ ಹೊಡೆತಕ್ಕೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ಭಾರಿ ಮಳೆಯ ಹೊಡೆತಕ್ಕೆ ತೋಟಗಾರಿಕೆ ಬೆಳೆಗಳಾದ ಬೀನ್ಸ್, ಟೊಮೆಟೊ, ಹೂ ತೋಟಗಳು ನೆಲ ಕಚ್ಚಿವೆ. ಬೀದರ್, ಭಾಲ್ಕಿ, ಹುಮನಾಬಾದ್, ಔರಾದ್, ಬಸವಕಲ್ಯಾಣ, ಹುಲಸೂರು, ಚಿಟಗುಪ್ಪ, ಕಮಲನಗರ ಸೇರಿದಂತೆ ಜಿಲ್ಲಾದ್ಯಂತ ಮಧ್ಯಾಹ್ನ ಒಂದು ಗಂಟೆಗೂ ಆಲಿಕಲ್ಲು ಸಹಿತ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಬಿಳಿಜೋಳ ಸೇರಿ ಇತರ ಬೆಳೆಗಳನ್ನು ರೈತರು ರಾಶಿ ಮಾಡುವ ಹೊತ್ತಿನಲ್ಲಿ ಮಳೆ ಸುರಿದಿದ್ದರಿಂದ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಆಲಿಕಲ್ಲು ಸುರಿದಿರುವುದು
ಆಲಿಕಲ್ಲು ಸುರಿದಿರುವುದು

ಆಲಿಕಲ್ಲು ಬಿದ್ದ ಸ್ಥಳಕ್ಕೆ ಡಿಸಿ ಭೇಟಿ, ಪರಿಶೀಲನೆ: ತಾಲೂಕಿನ ಜನವಾಡ ಮತ್ತು ಮರಕಲ್ ಗ್ರಾಮದಲ್ಲಿ ಬಿದ್ದ ಆಲಿಕಲ್ಲುಗಳ ರಾಶಿ ನೋಡಲು ಜನ ಮುಗಿಬಿದ್ದಿದ್ದು, ಅಕ್ಷರಶಃ ಕರ್ನಾಟಕ ಜಮ್ಮು-ಕಾಶ್ಮೀರವಾಗಿ ಮಾರ್ಪಟ್ಟಿತು. ವಾಹನಗಳನ್ನು ನಿಲ್ಲಿಸಿ ಜನ ಫೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದರು. ಡಿ ಸಿ ಗೋವಿಂದರೆಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ ಮರಕಲ್‍ಗೆ ಭೇಟಿ ನೀಡಿ ಆಲಿಕಲ್ಲು ಬಿದ್ದಿರುವುದನ್ನು ವೀಕ್ಷಿಸಿದರು.

ನಗರ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆ ಮುಸುಕುಧಾರೆಯಾಗಿದೆ. ಇದರಿಂದ ವಿವಿಧೆಡೆ ಪ್ರಮುಖ ರಸ್ತೆಗಳು ಜಲಾವೃತವಾಗಿ ಕೆಲಕಾಲ ಸುಗಮ ಸಂಚಾರಕ್ಕೆ ವ್ಯತ್ಯಯವಾಯಿತು. ಮಳೆ ಜತೆಯಲ್ಲಿ ಆಲಿಕಲ್ಲಿನ ಆರ್ಭಟವಿತ್ತು. ಹೀಗಾಗಿ ರಸ್ತೆಗಳ ಮೇಲೆ ಆಲಿಕಲ್ಲು ರಾಶಿ ಕಂಡುಬಂತು. ಆಲಿಕಲ್ಲು ಕಂಡು ಅನೇಕರು ಖುಷಿಪಟ್ಟರು. ಮಕ್ಕಳು ಮನೆ ಹೊರಗೆ ಬಂದು ಆಲಿಕಲ್ಲು ತಿಂದು ಸಂಭ್ರಮಿಸಿದರು.

ಗಾಳಿಮಳೆಯಿಂದ ಮಾವಿನ ಇಳುವರಿಗೆ ಪೆಟ್ಟು: ಶುಕ್ರವಾರದಿಂದ ಶನಿವಾರ ಬೆಳಗ್ಗೆ 8 ರವರೆಗೆ ಜಿಲ್ಲೆಯಲ್ಲಿ ಸರಾಸರಿ 23. 83 ಮಿ. ಮೀ ನಷ್ಟು ಮಳೆಯಾಗಿದೆ. ನಗರದಲ್ಲಿ 71.20 ಮಿ.ಮೀ. ಮಳೆಯಾಗಿದೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಅಕಾಲಿಕ ಮಳೆ ಬಿದ್ದಿದ್ದರಿಂದ ಮಾವಿಗೆ ಪೆಟ್ಟು ಬಿದ್ದಿದೆ. ಪ್ರಸಕ್ತ ವರ್ಷ ಮಳೆ ಉತ್ತಮವಾಗಿದೆ. ಆದರೆ ಇತ್ತೀಚಿನ ಆಲಿಕಲ್ಲು ಮಳೆ, ಗಾಳಿಯಿಂದಾಗಿ ಜಿಲ್ಲೆಯಲ್ಲಿ ಮಾವಿನ ಇಳುವರಿಗೆ ಪೆಟ್ಟು ಬಿದ್ದಿದೆ.

ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರರು ತತ್ತರಿಸಿದ್ದು, ಔಖಳಿ ಮಳೆ, ಗಾಳಿಯಿಂದ ಶೇ. 20ರಷ್ಟು ಹಾನಿಯಾಗುವ ಸಾಧ್ಯತೆ ಇದೆ. ಇದೇ ರೀತಿ ಅಕಾಲಿಕ ಮಳೆ ಮುಂದುವರೆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ 2151 ಹೆಕ್ಟೇರ್ ಮಾವು ಬೆಳೆ ಇದೆ.

ಬೀದರ್ ತಾಲೂಕಿನಲ್ಲಿ 598, ಹುಮನಾಬಾದ್ 285, ಚಿಟಗುಪ್ಪ 365, ಬಸವಕಲ್ಯಾಣ 567, ಹುಲಸೂರು 77 ಹೆ. ಭಾಲ್ಕಿ 198 ಹೆ. ಕಮಲನಗರ 32 ಹೆ. ಹಾಗೂ ಔರಾದ್ ತಾಲೂಕಿನಲ್ಲಿ 29 ಹೆಕ್ಟೇರ್​ನಲ್ಲಿ ಮಾವು ಇದೆ. ಬಹುತೇಕ ಕಡೆ ಮರದ ತುಂಬೆಲ್ಲ ಹೂವು ಬಿಟ್ಟಿದೆ. ಆದರೆ ಔಖಲಿ ಮಳೆ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಮಳೆ ಸ್ಥಗಿತಗೊಂಡರೆ ಸದ್ಯಕ್ಕೆ ಇರುವಷ್ಟು ಫಸಲು ಪಡೆಯಬಹುದಾಗಿದೆ.

ಇದನ್ನೂ ಓದಿ : ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಸಿಂಚನ: ಆಲಿಕಲ್ಲು ಮಳೆಗೆ ತೆಲಂಗಾಣದಲ್ಲಿ ಬೆಳೆ ಹಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.