ಬೀದರ್: ಜಿಲ್ಲೆಯಲ್ಲಿಂದು ಕೊರೊನಾಗೆ ನಾಲ್ವರು ಬಲಿಯಾಗಿದ್ದು, 65 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಬೀದರ್ ತಾಲೂಕಿನ 75 ಹಾಗೂ 69 ವಯಸ್ಸಿನ ಇಬ್ಬರು ವೃದ್ಧರು, ಬಸವಕಲ್ಯಾಣ ಪಟ್ಟಣದ 55 ವರ್ಷದ ವ್ಯಕ್ತಿ ಹಾಗೂ ಔರಾದ್ ತಾಲೂಕಿನ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿನ ಮೃತರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.
ಔರಾದ್ ತಾಲೂಕಿನ 13, ಬಸವಕಲ್ಯಾಣ 03, ಭಾಲ್ಕಿ 21, ಬೀದರ್ 10, ಹುಮನಾಬಾದ್ನ 18 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 2,908ಕ್ಕೆ ಏರಿಕೆಯಾಗಿದೆ.
44 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,894 ಜನರು ಗುಣಮುಖರಾಗಿದ್ದಾರೆ. ಇನ್ನೂ 1,146 ಜನರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.