ಬೀದರ್: ಕೊರೊನಾ ವೈರಸ್ ಸೋಂಕು ನಿಯಂತ್ರಣ ತರುವ ಹಿನ್ನಲೆಯಲ್ಲಿ ದೇಶದ್ಯಾಂತ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲು ಬ್ರೇಕ್ ಹಾಕಿ ಚಿಟಗುಪ್ಪ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
![Breakdown to Namaz at Chitguppa Mosque for Lockdown](https://etvbharatimages.akamaized.net/etvbharat/prod-images/kn-bdr-01-27-tahsildarorder-7203280-av-0_27032020114347_2703f_1585289627_720.jpg)
ಜಿಲ್ಲೆಯ ಚಿಟಗುಪ್ಪ ಪಟ್ಟಣದ ಮಸೀದಿ ಎದುರು ರಾಜ್ಯ ಅಲ್ಪ ಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ ಇಲಾಖೆ ಕಾರ್ಯದರ್ಶಿ ಅವರ ಸೂತ್ತೊಲೆ ಹಿನ್ನಲೆಯಲ್ಲಿ ತಹಶೀಲ್ದಾರ ಜೀಯಾವುಲ್ಲಾ ಅವರು ಈ ಆದೇಶ ಹೊರಡಿಸಿದ್ದು, ಎಲ್ಲಾ ಮಸೀದಿಗಳ ಮುಂದೆ ಪ್ರತಿಯನ್ನು ಅಂಟಿಸಿದ್ದಾರೆ.
ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದು, ಈ ನಿಟ್ಟಿನಲ್ಲಿ ಕೊರೊನಾ ರೋಗ ನಿಯಂತ್ರಣಕ್ಕೆ ತಂದು ಜನರು ಸಾಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳಲ್ಲೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.