ಬೀದರ್: ಶುಕ್ರವಾರ ಸಾಯಂಕಾಲ ಸುರಿದ ಧಾರಾಕಾರ ಮಳೆಯ ವೇಳೆ ಸಿಡಿಲು ಬಡಿದು ಜಿಲ್ಲೆಯ ಎರಡು ಪ್ರತ್ಯೇಕ ಅವಘಡಗಳಲ್ಲಿ ಯುವಕನೊಬ್ಬ ಸೇರಿದಂತೆ 15 ಆಡುಗಳು ಸಾವನ್ನಪ್ಪಿವೆ.

ಜಿಲ್ಲೆಯ ಔರಾದ್ ತಾಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಮಾರುತಿ ಅಶೋಕ್ ಸಿಂಗೋಡೆ ಹಟಕಾರ (28) ಎಂಬಾತ ಹೊಲದ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಸಾವನಪ್ಪಿದ್ದಾನೆ. ಇನ್ನು ಠಾಣಾ ಕುಶನೂರ್ ಸಮೀಪದ ಪ್ರವಾಸಿ ಮಂದಿರ ಹತ್ತಿರದ ತಾಂಡಾದಲ್ಲಿ ಪ್ರತಾಪ ಆಡೇ ಎಂಬಾತನಿಗೆ ಸೇರಿದ 15 ಆಡುಗಳು ಮೃತಪಟ್ಟಿವೆ.
ಸ್ಥಳಕ್ಕೆ ಠಾಣಾ ಕುಶನೂರು ಪಿಎಸ್ಐ ವಿ.ಬಿ ಯಾದವಾಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.