ಬೀದರ್: ಬಂಜರು ಭೂಮಿಯಲ್ಲಿ ಆ್ಯಪಲ್ ಬಾರೇಕಾಯಿ ಗಿಡ ಬಡ ರೈತನಿಗೆ ವರವಾಗಿದ್ದು, ಮಳೆ ಇಲ್ಲದೆ ಕಡಿಮೆ ಖರ್ಚಿನಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಬಯಲು ಸೀಮೆಯ ಸಾಧಕ ರೈತನ ಯಶೋಗಾಥೆ ಇಲ್ಲಿದೆ.
ಜಿಲ್ಲೆಯ ಔರಾದ್ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಸೈಯದ್ ಸಲೀಮ್ ಅನ್ಸಾರಿ, 21 ಎಕರೆ ಬಂಜರು ಭೂಮಿಯಲ್ಲಿ ತರಹೆವಾರಿ ತೋಟಗಾರಿಕೆ ಬೆಳೆಗಳು ಬೆಳೆದು ಕೈ ತುಂಬಾ ಸಂಪಾದನೆ ಕಂಡುಕೊಂಡಿದ್ದಾರೆ.
ರಾಜ್ಯದಲ್ಲಿ ಬಹುತೇಕ ಮೊದಲ ಬಾರಿಗೆ ಆ್ಯಪಲ್ ಬಾರೇ ಗಿಟ್ಟ ನೆಟ್ಟು ಎರಡು ವಾರದಲ್ಲೆ 10 ಲಕ್ಷ ರುಪಾಯಿಯಷ್ಟು ವ್ಯಾಪಾರ ಮಾಡುತ್ತಿದ್ದಾರೆ ಈ ರೈತ. ಹನಿ ನೀರಾವರಿ ಮೂಲಕ ತನ್ನ 21 ಎಕರೆ ಜಮೀನಿನಲ್ಲಿ ಹತ್ತಾರು ಬಗೆಯ ತೋಟಗಾರಿಕೆ ಗಿಡಗಳು ನೆಟ್ಟಿದ್ದಾರೆ. ಆದರೆ ಬಹುತೇಕ 6 ಎಕರೆ ಜಮೀನಿನಲ್ಲಿ ಆ್ಯಪಲ್ ಬಾರೇ ಗಿಡ ನೆಟ್ಟಿದ್ದಾರೆ.
ಇದರಿಂದ ಸದಾ ಮಳೆಗಾಲದ ಅಭಾವದಿಂದ ಅಂತರ್ ಜಲ ಮಟ್ಟ ಕುಸಿತ ಕಂಡು ಭೂಮಿಯಲ್ಲಿ ನೀರಿಲ್ಲದಕ್ಕೆ ಕಂಗಾಲಾಗಿ ಹೊಗುವ ರೈತರ ನಡುವೆ ಕಡಿಮೆ ನೀರನ್ನು ಬಳಸಿಕೊಂಡು ವಿನೂತನ ಬೆಳೆಗಳು ಬೆಳೆದು ಲಾಭದಾಯಕ ಕೃಷಿ ಪದ್ದತಿ ಅಳವಡಿಸಿಕೊಂಡ ರೈತನ ಸಾಧನೆ ಮಾದರಿಯಾಗಿದೆ.
ಅಂದಾಜು 1000 ಆ್ಯಪಲ್ ಬಾರಿ ಗಿಡಗಳನ್ನು ನೆಟ್ಟಿರುವ ರೈತ ಅನ್ಸಾರಿ, ಗ್ರೀನ್ ಆ್ಯಪಲ್ ಮಾದರಿಯಲ್ಲಿ ಕಾಣುವ ಬಾರೇಕಾಯಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಗೆ ಕಾರಣವಾಗಿದೆ. 6 ವರ್ಷಗಳಲ್ಲಿ ಗಿಡಗಳು ಇಳುವರಿ ನೀಡಲು ಆರಂಭಿಸಿದ್ದು, ಇದರಿಂದ ಸಾಕಷ್ಟು ಲಾಭವಾಗಿದೆ ಅಂತಾರೆ ರೈತ ಅನ್ಸಾರಿ.
ಇದನ್ನೂ ಓದಿ: ಓದಿರೋದು ಪಿಯುಸಿ, ಲಕ್ಷ ಲಕ್ಷ ಸಂಪಾದನೆ... ಕೃಷಿಯಲ್ಲೇ ಖುಷಿ ಕಂಡ ಈ ಮಾದರಿ ರೈತ