ETV Bharat / state

ಮಹಾಮಾರಿ ಕೊರೊನಾಗೆ ಬಸವಕಲ್ಯಾಣ ನಗರಸಭೆ ಸದಸ್ಯೆ ಬಲಿ

ಬಸವಕಲ್ಯಾಣ ನಗರದ ತ್ರಿಪುರಾಂತನ ವಾರ್ಡ್ ಸಂಖ್ಯೆ- 23ರ ನಗರಸಭೆ ಸದಸ್ಯೆ ಲಲಿತಾಬಾಯಿ ಗಣಪತಿರಾವ್ ಡಾಂಗೆ (58) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

Corona death
Corona death
author img

By

Published : Apr 27, 2021, 10:29 PM IST

ಬಸವಕಲ್ಯಾಣ: ಮಹಾಮಾರಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಕೆಲ ದಿನಗಳ ಹಿಂದೆ ಇಲ್ಲಿನ ನಗರಸಭೆಯ ಬಿಜೆಪಿ ಸದಸ್ಯರೊಬ್ಬರನ್ನು ಬಲಿ ಪಡೆದಿದ್ದ ಕೊರೊನಾ ಸೋಂಕು, ಮಂಗಳವಾರ ಮತ್ತೊಬ್ಬ ಸದಸ್ಯರನ್ನು ಬಲಿ ಪಡೆದಿದೆ.

ನಗರದ ತ್ರಿಪುರಾಂತನ ವಾರ್ಡ್ ಸಂಖ್ಯೆ-23ರ ನಗರಸಭೆ ಸದಸ್ಯೆ ಲಲಿತಾಬಾಯಿ ಗಣಪತಿರಾವ್ ಡಾಂಗೆ (58) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಏಪ್ರಿಲ್ 16ರಂದು ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತ ಪಡಿಸಿವೆ. ಮೃತರು ಪತಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ.

ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಲಲಿತಬಾಯಿ ಡಾಂಗೆ ಅವರು, ಕಳೆದ ಸಾಲಿನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಾರ್ಡ್-23ರಿಂದ ಆಯ್ಕೆಯಾಗುವ ಮೂಲಕ ಇದೇ ಮೊದಲ ಬಾರಿಗೆ ನಗರಸಭೆ ಪ್ರವೇಶಿಸಿದ್ದರು.

ಮಹಾಮಾರಿ ಕೊರೊನಾ ಸೋಂಕಿನಿಂದ ಕಳೆದ ತಿಂಗಳು ಇಲ್ಲಿಯ ವಾರ್ಡ್-11ರ ನಗರಸಭೆ ಬಿಜೆಪಿ ಸದಸ್ಯ ಮಾರುತಿ ಲಾಡೆ ಬಲಿಯಾಗಿದ್ದರು. ಇದೀಗ ಅದೇ ಪಕ್ಷಕ್ಕೆ ಸೇರಿದ ಮತ್ತೊಬ್ಬ ಸದಸ್ಯರನ್ನು ಬಲಿ ಪಡೆಯುವ ಮೂಲಕ ತನ್ನ ಅಟ್ಟ ಹಾಸ ಮುಂದುವರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.