ETV Bharat / state

ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ಬಲಿ: ಮೃತರ ಸಂಖ್ಯೆ 8ಕ್ಕೆ ಏರಿಕೆ - Death toll rises to 8

ಬಸವಕಲ್ಯಾಣ ನಗರದ ಶಾಹುಸೇನ್‌ಗಲ್ಲಿಯ 40 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಈ ಮೂಲಕ ಮೃತರ ಸಂಖ್ಯೆ ಏಂಟಕ್ಕೆ ಏರಿದೆ. ಇದುವರೆಗೆ ತಾಲೂಕಿನಲ್ಲಿ 255 ಜನ ಸೋಂಕಿತರಿದ್ದು, 200ಕ್ಕೂ ಅಧಿಕ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ವ್ಯಕ್ತಿ ಬಲಿಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ವ್ಯಕ್ತಿ ಬಲಿ
ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ವ್ಯಕ್ತಿ ಬಲಿ
author img

By

Published : Jul 6, 2020, 9:17 PM IST

ಬಸವಕಲ್ಯಾಣ( ಬೀದರ್​): ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಬಸವಕಲ್ಯಾಣ ನಗರದಲ್ಲಿ ಕೊರೊನಾಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ನಗರದ ಶಾಹುಸೇನ್‌ಗಲ್ಲಿಯ 40 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾನೆ. ಕಳೆದ ಜೂನ್ 25ರಂದು ಈತ ಹೃದಯಾಘಾತಕ್ಕೊಳಗಾಗಿದ್ದ. ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಆಗಮಿಸುವಾಗ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದ. ಈ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಸೋಮವಾರದ ವರದಿಯಲ್ಲಿ ದೃಢಪಟ್ಟಿದೆ.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಬಲಿಯಾದವರ ಸಂಖ್ಯೆಯೂ ಏರುತ್ತಿದೆ. ಇದುವರೆಗೆ ತಾಲೂಕಿನಲ್ಲಿ 255 ಜನ ಸೋಂಕಿತರಿದ್ದು, 200ಕ್ಕೂ ಅಧಿಕ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.