ಬೀದರ್ : ಲಾಕ್ಡೌನ್ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕಳ್ಳಭಟ್ಟಿ ಸಾರಾಯಿ ಅಡ್ಡೆ ಮೇಲೆ ದಾಳಿ ನಡೆಸಿ ಅಬಕಾರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ಜನತಾ ಕಾಲೋನಿಯಲ್ಲಿ 6 ಲೀಟರ್ ಕಳ್ಳಭಟ್ಟಿ ಸಾರಾಯಿ, ಇಂಚೂರ್ ಗ್ರಾಮದಲ್ಲಿ ಅಕ್ರಮ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ 10,800 ಲೀಟರ್ ಮದ್ಯ ಹಾಗೂ ಖೂಂದಪೂರ್ ಗ್ರಾಮದ ಕಿರಾಣಿ ಅಂಗಡಿಯಲ್ಲಿದ್ದ 93,600 ಲೀಟರ್ ಬಿಯರ್ ಜಪ್ತಿ ಮಾಡಿರುವ ಪೊಲೀಸರು, ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.