ETV Bharat / state

ಬೀದರ್​​ನಲ್ಲಿ ಮುಂದುವರೆದ 'ಮಹಾ' ಕಂಟಕ: ಇಂದು ಮತ್ತೆ 12 ಜನರಲ್ಲಿ ಕೊರೊನಾ ಪತ್ತೆ!

ಬೀದರ್ ಜಿಲ್ಲೆಯಲ್ಲಿ ಇಂದು ಬಿಡುಗಡೆಯಾದ ಹೆಲ್ತ್​ ಬುಲೆಟಿನ್​ನಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ 11 ಜನ ಸೇರಿ ಒಟ್ಟು 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಲಾಗಿದೆ.

12 more corona possitive case in bidar
ಬೀದರ್​​ನಲ್ಲಿ 12 ಜನರಲ್ಲಿ ಕೊರೊನಾ ಸೊಂಕು
author img

By

Published : May 27, 2020, 2:10 PM IST

ಬೀದರ್: ಮಹಾರಾಷ್ಟ್ರದಿಂದ ವಾಪಸಾದವರಿಂದ ಕೊರೊನಾ ಸೋಂಕು ಕಂಟಕವಾಗಿ ಪರಿಣಮಿಸಿದೆ. ಇಂದು ಮತ್ತೆ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ಬಸವಕಲ್ಯಾಣ ತಾಲೂಕಿನ ಕೊಹಿನೂರು, ಶಿರಗುರ, ಗದಲೆಗಾಂವ್(ಕೆ), ಬಟಗೇರಾ, ಲಾಡವಂತಿ ಹಾಗೂ ಅಟ್ಟೂರ ಗ್ರಾಮಗಳಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರೆದಿದೆ. ಈ ಪೈಕಿ 11 ಜನ ಮಹಾರಾಷ್ಟ್ರದಿಂದ ವಾಪಸಾದವರಾಗಿದ್ದು, ಇವರೆಲ್ಲರು ಸ್ಥಳೀಯ ಕ್ವಾರಂಟೈನ್​ಗೆ ಒಳಗಾಗಿದ್ದರು.

ಬಸವಕಲ್ಯಾಣ ತಾಲೂಕಿನ ಶಿರಗುರ ಗ್ರಾಮದ ಕ್ವಾರಂಟೈನ್​ನಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಪಿ-2318, 20 ವರ್ಷದ ಯುವಕನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಜೊತೆಗೆ ಇಂದು ಜಿಲ್ಲಾ ಕೊರೊನಾ ಆಸ್ಪತ್ರೆಯಲ್ಲಿ ಮೂವರು ಗುಣಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾದರೆ, ಗುಣಮುಖರಾದವರ ಸಂಖ್ಯೆ 24ಕ್ಕೆ ಏರಿದೆ. ಇಬ್ಬರು ಸಾವನ್ನಪ್ಪಿದ್ದು, ಉಳಿದ 81 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.