ಬಳ್ಳಾರಿ: ಗಣಿನಾಡು ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ನಲ್ಲಿ ಶುಕ್ರವಾರ ಸಂಜೆಯಿಂದಲೇ ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಐದನೇ ದಿನ ಹೊರಡುವ ಕೌಲ್ ಬಜಾರ್ನಲ್ಲಿಯ ಮಾರವಾಡಿ ಗಣೇಶ, ಅಂತೋನಿ ಕಾಲೋನಿಯ ಗಣೇಶ್, ರೇಡಿಯೋ ಪಾರ್ಕ್ ಗಣೇಶ ಮತ್ತು ಇನ್ನಿತರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಜಮುಖನ ಮೂರ್ತಿಗಳ ನಿಮಜ್ಜನ ನೆರವೇರಿಸಲಾಯಿತು.
ಈ ಸಮಯದಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ಜೊತೆಗೆ ಡಿಜೆ ಹಾಡುಗಳಿಗೆ ಯುವಕರು, ಯುವತಿಯರು ಟಪಾಂಗುಚ್ಚಿ ಸ್ಟೆಪ್ ಹಾಕಿದರು. ಇನ್ನು ಗಣಿನಾಡಿನಲ್ಲಿ ಗಣೇಶನ ನಿಮಜ್ಜನೆ ವೇಳೆ ಯುವಕರು, ವಯಸ್ಕರು ಕೋಲಿಗೆ ಬೆಂಕಿ ಹಚ್ಚಿಕೊಂಡು ಅದರೊಂದಿಗೆ ದುಸ್ಸಾಹಸ ಮೆರೆದಿದ್ದಾರೆ.