ETV Bharat / state

ರೈತ ವಿರೋಧಿ ಆನಂದ್​​ ಸಿಂಗ್​ ಪರ ಹೇಗೆ ಪ್ರಚಾರ ಮಾಡುತ್ತೀರಿ: ಶ್ರೀರಾಮುಲುಗೆ ಉಗ್ರಪ್ಪ ಪ್ರಶ್ನೆ

ಆನಂದ್​ ಸಿಂಗ್​ ರೈತ ವಿರೋಧಿ ಎಂದು ತಾವೇ ಹೇಳಿದ್ದೀರಿ. ಈಗ ಅದೇ ರೈತ ವಿರೋಧಿ ಪರ ಹೇಗೆ ಪ್ರಚಾರ ಮಾಡುತ್ತಿದ್ದೀರಾ ಎಂದು ಸಚಿವ ಶ್ರೀರಾಮುಲುಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ಶ್ರೀರಾಮುಲು ವಿರುದ್ಧ ಉಗ್ರಪ್ಪ ಕಿಡಿ
author img

By

Published : Nov 18, 2019, 1:48 PM IST

ಬಳ್ಳಾರಿ: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನರ್ಹ ಶಾಸಕ ಆನಂದ್​ ಸಿಂಗ್ ರೈತ ವಿರೋಧಿಯಾಗಿದ್ದಾರೆ‌. ಅವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಬಳ್ಳಾರಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೇ ಆನಂದ್​ ಸಿಂಗ್ ರೈತ ವಿರೋಧಿ ಎಂದು ಹೇಳಿದ್ದಾರೆ. ಈಗ ಅದೇ ರೈತ ವಿರೋಧಿಗೆ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಶ್ರೀರಾಮುಲು ವಿರುದ್ಧ ಉಗ್ರಪ್ಪ ಕಿಡಿ

ಐಎಸ್​​ಆರ್ ಸಕ್ಕರೆ ಕಾರ್ಖಾನೆ ಬಂದ್ ಮಾಡಿರುವುದನ್ನು ಖಂಡಿಸಿ ಕೈಗೊಂಡಿದ್ದ ರೈತರ ಪ್ರತಿಭಟನೆಯಲ್ಲಿ ಸ್ವತಃ ಶ್ರೀರಾಮುಲು ಅವರೇ ಭಾಗಿಯಾಗಿ, ಆನಂದ್​ ಸಿಂಗ್​ ರೈತ ವಿರೋಧಿ ಎಂದು ಜರಿದಿದ್ದರು. ಆಗ ಅವರು ರಾಜಕೀಯವಾಗಿ ಆ ಮಾತನ್ನು ಹೇಳಿರಬಹುದು. ಆದರೆ ಈಗ ‌ಅದೇ ರೈತ ವಿರೋಧಿ ವ್ಯಕ್ತಿಯನ್ನ ಸೋಲಿಸಿ ಎಂದು ಹೇಳಿದರು. ಸಚಿವ ಶ್ರೀರಾಮುಲು ರಾಜಕೀಯವಾಗಿ ಗುರುತಿಸಿಕೊಂಡವರು. ಆದ್ದರಿಂದ ರೈತಾಪಿ ವರ್ಗದವರೊಂದಿಗೆ ಈ ರೀತಿಯ ಚೆಲ್ಲಾಟ ಆಡಬಾರದು. ವಿಜಯನಗರ ಕ್ಷೇತ್ರದ ಮತದಾರರು ಬಹಳ ಪ್ರಬುದ್ಧರು. ಈ ಬಾರಿ ಉತ್ತಮ ಫಲಿತಾಂಶ ನೀಡಲಿದ್ದಾರೆಂಬ ನಿರೀಕ್ಷೆಯಲ್ಲಿರುವೆ ಎಂದರು.

Intro:ರೈತ ವಿರೋಧಿ ಆನಂದಸಿಂಗ್ ಅವರನ್ನ ಸೋಲಿಸಿ: ಮಾಜಿ ಸಂಸದ ಉಗ್ರಪ್ಪ..!
ಬಳ್ಳಾರಿ: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿರೊ ಅನರ್ಹ ಶಾಸಕ ಆನಂದ ಸಿಂಗ್ ರೈತ ವಿರೋಧಿಯಾಗಿದ್ದಾರೆ.‌ ಅವರನ್ನ ಈ ಉಪಚುನಾವಣೆಯಲಿ ಸೋಲಿಸಬೇಕೆಂದು ಮಾಜಿ ಸಂಸದ ಉಗ್ರಪ್ಪನವ್ರು ಮತದಾರರಲ್ಲಿ ವಿನಂತಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು‌ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೇ ರೈತ ವಿರೋಧಿ ಎಂದೇ ಜರಿದಿದ್ದಾರೆ. ಹೀಗಾಗಿ, ಆನಂದಸಿಂಗ್ ಅವರನ್ನ ಸೋಲಿಸಲು ಸಚಿವ ಶ್ರೀರಾಮುಲು ಶ್ರಮವಹಿಸಬೇಕು
ಎಂದ್ರು.

Body:ಅನರ್ಹ ಶಾಸಕ ಆನಂದಸಿಂಗ್ ಅವರು ರೈತ ವಿರೋಧಿ ಗಳೆಂದು ಐಎಸ್ ಆರ್ ಸಕ್ಕರೆ ಕಾರ್ಖಾನೆ ಬಂದ್ ಮಾಡಿ ರೋದನ್ನ ಖಂಡಿಸಿ ಕೈಗೊಂಡಿದ್ದ ರೈತರ ಪ್ರತಿಭಟನೆಯಲಿ
ಸ್ವತಃ ಶ್ರೀರಾಮುಲು ಅವರೇ ಭಾಗಿಯಾಗಿ ರೈತ ವಿರೋಧಿ
ಎಂದಿದ್ದಾರೆ. ಅವರು ರಾಜಕೀಯವಾಗಿ ಮಾತನಾಡ್ಲಿ ಬಿಡಿ.‌ ಅಂತಹ ವ್ಯಕ್ತಿಯನ್ನು ಸೋಲಿಸಬೇಕೆಂದ್ರು.
ಹಾಲಿ ಸಚಿವ ಶ್ರೀರಾಮುಲು ಅವರು, ಈ ರಾಜ್ಯದ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗಳಾಗೋರು. ರಾಜಕೀಯ
ವಾಗಿ ಗುರುತಿಸಿಕೊಂಡ ಸಚಿವ ಶ್ರೀರಾಮುಲು ರೈತಾಪಿ ವರ್ಗದವರೊಂದಿಗೆ ಈ ರೀತಿಯ ಚೆಲ್ಲಾಟ ಆಡಬಾರದು. ಅವರು, ಆನಂದಸಿಂಗ್ ಬಗ್ಗೆ ಚೆನ್ನಾಗಿ‌ ತಿಳಿದುಕೊಂಡಿದ್ದಾರೆ.
ಈ ಉಪಚುನಾವಣೆಯಲಿ ಸಚಿವ ಶ್ರೀರಾಮುಲು ಅವರು ಆನಂದಸಿಂಗ್ ಅವರನ್ನ ಸೋಲಿಸಬೇಕೆಂದರು.
ಗಣಿ ಅಕ್ರಮ ಹಾಗೂ ಗಣಿಯನ್ನೇ ದಾನಿಗಳಿಗೆ ನೀಡಿರೊ ವ್ಯಕ್ತಿಗಳ ನಡುವೆ ಮೆಗಾ ಫೈಟ್ ನಡೆದಿದೆ.‌ ವಿಜಯನಗರ ಕ್ಷೇತ್ರದ ಮತದಾರರು ಬಹಳ ಪ್ರಬುದ್ಧರು ಇದ್ದಾರೆ.‌ ಈ ಬಾರಿ ಉತ್ತಮ ಫಲಿತಾಂಶ ನೀಡಲಿದ್ದಾರೆಂಬ ನಿರೀಕ್ಷೆಯಲ್ಲಿರುವೆ ಎಂದ್ರು.

Conclusion:ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿಯವರನ್ನ
ಕ್ಷಮೆ ಕೇಳುವ ಬಿಜೆಪಿಯವ್ರು ಈ ದೇಶದ ರಕ್ಷಣೆ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಕ್ಷಮೆಯಾಚಿಸಬೇಕೆಂದರು.
ಮುಖಂಡರಾದ ಬಿ.ಎಂ.ಪಾಟೀಲ, ಎಂ.ಹನುಮ ಕಿಶೋರ, ಅಸುಂಡಿ ನಾಗರಾಜಗೌಡ, ರಘುರಾಮಕೃಷ್ಣ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_1_EX_MP_UGRAPPA_PRESS_MEET_BYTE_VSL_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.