ETV Bharat / state

ವಿಜಯನಗರ ಜಿಲ್ಲೆ ಪರ ಮತ್ತೆ ಧ್ವನಿ ಎತ್ತಿದ ಅನರ್ಹ ಶಾಸಕ: ಆನಂದ್​ ಸಿಂಗ್​ ವಿಡಿಯೋ ವೈರಲ್​ - ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿಡಿಯೋಗೆ ಆನಂದ್​ ಸಿಂಗ್​ ವೈಸ್ ಓವರ್​

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಅನರ್ಹ ಶಾಸಕ ಆನಂದ್​ ಸಿಂಗ್ ಮತ್ತೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಮಾಡಲಾಗಿದ್ದು, ಆನಂದ್​ ಸಿಂಗ್ ಅವರ ಧ್ವನಿ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಜಯನಗರ ಜಿಲ್ಲೆ ರಚನೆ ಬಗ್ಗೆ ವಿಡಿಯೋ
author img

By

Published : Nov 10, 2019, 5:05 PM IST

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಅನರ್ಹ ಶಾಸಕ ಆನಂದ್​ ಸಿಂಗ್ ಮತ್ತೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಮಾಡಲಾಗಿದ್ದು, ಅದಕ್ಕೆ ಆನಂದ್​ ಸಿಂಗ್ ಅವರ ಹಿನ್ನಲೆ ಧ್ವನಿ ಇರುವುದು ವಿಶೇಷ.

ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆಯಿಂದ ನೀತಿ ಸಂಹಿತೆ ಜಾರಿಯಾಗುವ ಮುನ್ನಾದಿನವೇ ಅನರ್ಹ ಶಾಸಕ ಆನಂದ್​ ಸಿಂಗ್ ವಿಜಯನಗರ ವಿಚಾರವಾಗಿ ಮತ್ತೊಮ್ಮೆ ಮಾತನಾಡಿದ್ದಾರೆ. ವಿಜಯನಗರ ಜಿಲ್ಲೆ ರಚನೆ ವಿಚಾರವಾಗಿ ಸ್ವತಃ ಆನಂದ್​ ಸಿಂಗ್ ವಾಯ್ಸ್ ಓವರ್ ನೀಡುವ ಮೂಲಕ ಕ್ಷೇತ್ರದ ಜನರಿಗೆ ಸಂದೇಶ ರವಾನಿಸಿದ್ದಾರೆ. ವಿಜಯನಗರದ ಪ್ರಮುಖ ಸ್ಥಳಗಳು, ನಾಯಕರು, ಸ್ಮಾರಕಗಳ ಫೊಟೋ ಬಳಸಿಕೊಂಡು ವಿಡಿಯೋ ಮಾಡಲಾಗಿದ್ದು, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಭಾವಚಿತ್ರಗಳು ಆರಂಭದಲ್ಲೇ ಕಾಣಿಸುತ್ತವೆ.

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಬಗ್ಗೆ ವಿಡಿಯೋ

ವಿಡಿಯೋದಲ್ಲಿ ಇರೋದೇನು?

ಆನರ್ಹ‌ ಶಾಸಕ ಆನಂದ್​ ಸಿಂಗ್ ಹಿನ್ನಲೆ ಧ್ವನಿ​ ಮೂಲಕ ವಿಜಯ ನಗರ ಜಿಲ್ಲೆಯ ಅವಶ್ಯಕತೆ ಹಾಗೂ ಈ ವಿಚಾರವಾಗಿ ನಡೆದ ಘಟನಾವಳಿಗಳ ಬಗ್ಗೆ ತಿಳಿಸಲಾಗಿದೆ. 'ಆತ್ಮೀಯ ಬಂಧುಗಳೇ ನಿಮ್ಮ ಮನೆ ಮಗ ಆನಂದಸಿಂಗ್ ಮಾಡುವ ನಮಸ್ಕಾರಗಳು ಎಂದು ಮಾತು ಆರಂಭಿಸುವ ಆನಂದ್​ ಸಿಂಗ್​, ವಿಜಯನಗರ ಜಿಲ್ಲೆಯಾಗುವ ಸಮಯ ಹತ್ತಿರ ಬಂದಿದೆ. ವಿಜಯನಗರ ಜಿಲ್ಲೆಯ ರಚನೆ ಪ್ರಸ್ತಾಪ ಇಂದು ನಿನ್ನೆಯದಲ್ಲ ದಶಕಗಳ ಕನಸು. ಹೀಗಾಗಿ ಸಿಎಂ ಬಳಿ ನಿಯೋಗ ಮಠಾಧೀಶರ ಹಾಗೂ ಸರ್ವಪಕ್ಷ ನಿಯೋಗ ಕೊಂಡೊಯ್ದೆ. ಆಗ ಸಿಎಂ ಕೂಡಾ ಪರೋಕ್ಷವಾಗಿ ಸ್ಪಂದಿಸಿರುತ್ತಾರೆ. 2019ರ ಅಕ್ಟೋಬರ್ 3ರಂದು ನನಸಾಗಬೇಕಿದ್ದ ಕನಸು ತಾಂತ್ರಿಕ ಕಾರಣದಿಂದ ಮುಂದೂಡಲ್ಪಟ್ಟಿದೆ'.

'ವಿಜಯನಗರ ಜಿಲ್ಲೆಯಾಗುವುದು ಶತಸಿದ್ಧ. ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಲು ಮಠಾಧೀಶರುಗಳು ಹಾಗೂ ಸರ್ವಪಕ್ಷಗಳ ಜನಪ್ರತಿನಿಧಿಗಳು ನಮ್ಮೊಂದಿಗೆ ಬೆಂಬಲವಾಗಿರುವುದು ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ನೀವುಗಳು ಸಹ ಪಕ್ಷಾತೀತವಾಗಿ ಜಿಲ್ಲೆಯ ರಚನೆ ಕನಸಿಗೆ ನೀಡುತ್ತಿರುವ ಪ್ರೋತ್ಸಾಹದಿಂದ ಅದು ನನಸಾಗುವ ದಿನ ಹತ್ತಿರದಲ್ಲಿದೆ. ಮುಂದೆಯೂ ಸಹ ನಿಮ್ಮ ಬೆಂಬಲ ನಮಗಿರಲಿ. ನಮ್ಮ ಸಾಂಸ್ಕೃತಿಕ ವೈಭವವನ್ನು ಹೊಂದಿರುವ ಸುಂದರ ಚಿತ್ರಗಳನ್ನು ಹೊಂದಿರುವ ಈ ಕಿರುಹೊತ್ತಿಗೆಯನ್ನು ನಮ್ಮ ವಿಜಯನಗರ ಜಿಲ್ಲೆಯ ಹೋರಾಟಗಾರರಿಗೆ ಹಾಗೂ ನಿಮ್ಮೆಲ್ಲರಿಗೆ ಅರ್ಪಿಸಲಾಗಿದೆ' ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Intro:ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಅನರ್ಹ ಶಾಸಕ ಆನಂದ ಸಿಂಗ್ ವಾಯ್ಸ್ ಓವರ್ ಇರೊ ಆಡಿಯೊ ವೈರಲ್..!
ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಅನರ್ಹ ಶಾಸಕ ಆನಂದಸಿಂಗ್ ಅವರ ವಾಯ್ಸ್ ಓವರ್ ಇರೊ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಪಚುನಾವಣೆ ನಿಮಿತ್ತ ನಾಳೆಯಿಂದ ನೀತಿ ಸಂಹಿತೆ ಜಾರಿಯಾಗೋ ಮುನ್ನಾದಿನವೇ ಅನರ್ಹ ಶಾಸಕ ಆನಂದ
ಸಿಂಗ್ ವಿಜಯನಗರ ವಿಚಾರವಾಗಿ ಮತ್ತೆ ಮಾತನಾಡಿದ್ದಾರೆ.
ವಿಜಯನಗರ ಜಿಲ್ಲೆ ವಿಚಾರವಾಗಿ ಸ್ವತಃ ಆನಂದಸಿಂಗ್ ಅವರೇ ತಮ್ಮ ಧ್ವನಿಯಲ್ಲೇ ವಾಯ್ಸ್ ಓವರ್ ನೀಡೋ ಮುಖೇನ ಕ್ಷೇತ್ರದ ಜನರಿಗೆ ಸಂದೇಶ ರವಾನಿಸಿದ್ದಾರೆ.
ಎರಡು ತಿಂಗಳ ಹಿಂದೆ ಸಿಎಂ‌ ಬಳ್ಳಾರಿ ನಾಯಕರ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಸಿಂಗ್. ಆದಾದ ಬಳಿಕ, ಅಂದ್ರೆ ಎರಡು ತಿಂಗಳ ನಂತರ ಸಿಂಗ್ ವಿಜಯನಗರ ಜಿಲ್ಲೆ ಬಗ್ಗೆ ಮತ್ತೆ ಮಾತ
ನಾಡಿದ್ದಾರೆ. ವಿಜಯನಗರದ ಪ್ರಮುಖ ಸ್ಥಳಗಳು, ನಾಯಕರು, ಸ್ಮಾರಕಗಳ ಪೋಟೋ ಹಾಕಿ ಸಿಂಗ್ ಆಡಿಯೊಗೆ ಸಿಂಕ್ ಮಾಡ ಲಾಗಿದೆ. ಆಡಿಯೊದಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಭಾವಚಿತ್ರ ಆರಂಭದಲ್ಲೇ ಕಾಣಿಸುವಂತೆ ಮಾಡಲಾಗಿದೆ.

Body:ಆಡಿಯೊದಲ್ಲಿ ಇರೋದೇನು…?
ಆನರ್ಹ‌ ಶಾಸಕ ಆನಂದಸಿಂಗ್ ತಮ್ಮ ಧ್ವನಿಯಲ್ಲೇ ವಿಜಯ
ನಗರ ಜಿಲ್ಲೆಯ ಅವಶ್ಯಕತೆ ಹಾಗೂ ಈ ವಿಚಾರವಾಗಿ ನಡೆದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ಮನೆ ಮಗ ಆನಂದಸಿಂಗ್ ಮಾಡುವ ನಮಸ್ಕಾರಗಳು ಎಂದು ಮಾತು ಆರಂಭಿಸಿದ್ದಾರೆ. ವಿಜಯನಗರ ಜಿಲ್ಲೆಯಾಗುವ ಸಮಯ ಹತ್ತಿರ ಬಂದಿದೆ. ವಿಜಯನಗರ ಜಿಲ್ಲೆಯ ಇಂದು ನಿನ್ನೆಯದಲ್ಲ ದಶಕಗಳ ಕನಸು. ಹೀಗಾಗಿ ಸಿಎಂ ಬಳಿ ನಿಯೋಗ ಮಠಾಧೀಶರ ಹಾಗೂ ಸರ್ವಪಕ್ಷ ನಿಯೋಗ ಕೊಂಡೊಯ್ದೆ.
ಆಗ ಸಿಎಂ ಕೂಡಾ ಪರೋಕ್ಷವಾಗಿ ಸ್ಪಂದಿಸಿ ರುತ್ತಾರೆ. 2019 ಅಕ್ಟೋಬರ್ 3 ರಂದು ನನಸಾಗಬೇಕಿದ್ದ ಕನಸು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ.
ವಿಜಯನಗರ ಜಿಲ್ಲೆಯಾಗುವುದು ಶತಸಿದ್ದ ಎಂದು ಆನಂದ್ ಪುನರು ಚ್ಚರಿಸಿದ್ದಾರೆ. ಈ ಬಗ್ಗೆ ಕಿರುವೊತ್ತಿಗೆ ಮಾಡಲಾಗಿ ಎಲ್ಲ‌ ಮಾಹಿತಿ‌ ತಿಳಿಸಲಾಗಿದೆ ಎಂದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_INELIGIBLE_MLA_ANADASINGH_AUDIO_WIRAL_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.