ETV Bharat / state

ಹೊಸಪೇಟೆಯಲ್ಲಿ ನವವಿವಾಹಿತೆ ಸಾವು; ಸಾವಿನ ಸುತ್ತ ಅನುಮಾನದ ಹುತ್ತ!

author img

By

Published : Sep 9, 2020, 8:35 PM IST

ನವವಿವಾಹಿತೆ ಅನುಮಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೀಗಾಗಿ ಸಾವನ್ನಪ್ಪಿದ ನವವಿವಾಹಿತೆ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ ಈಟಿವಿ ಭಾರತಕ್ಕೆ ದೂರವಾಣಿ ಸಂಪರ್ಕ‌ದ ಮೂಲಕ ತಿಳಿಸಿದ್ದಾರೆ.

suspicious death
ಗೌಸಿಯಾ

ಹೊಸಪೇಟೆ: ನಗರದ ಚಿತ್ತವಾಡ್ಗಿಯಲ್ಲಿ ಎರಡು ತಿಂಗಳಿನ‌‌ ನವವಿವಾಹಿತೆ ಅನುಮಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಸದ್ಯ ಸಾವಿನ ಸುತ್ತ ಅನುಮಾನಗಳೆದ್ದಿದ್ದು, ಈ ಕುರಿತು ಎರಡು ದೂರುಗಳು ದಾಖಲಾಗಿವೆ.

ಕಂಪ್ಲಿ ನಿವಾಸಿ ಗೌಸಿಯಾ(18) ಮೃತ ನವವಿವಾಹಿತೆ. ಕಳೆದ ಜೂನ್ 28 ರಂದು ಗೌಸಿಯಾಳನ್ನು ನಗರದ ಚಿತ್ತವಾಡ್ಗಿಯ ರಫೀಕ್ ಎಂಬ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಎರಡೂವರೆ ತಿಂಗಳ ಅವಧಿಯಲ್ಲೇ ನವವಿವಾಹಿತೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

suspicious death of newly-wed woman in Hospet
ದೂರು ಪ್ರತಿ

ಪ್ರಕರಣ ಸಂಬಂಧ ಎರಡು ದೂರುಗಳು ದಾಖಲಾಗಿದ್ದು, ಗೌಸಿಯಾ ಸಹೋದರ ಸಿಕಂದರ ಭಾಷಾ ನೀಡಿದ ದೂರಿನಲ್ಲಿ, ಚಿತ್ತವಾಡ್ಗಿಯ ಟಿಪ್ಪುನಗರದ ಗಂಡನ ಮನೆಯಲ್ಲಿ ತಂಗಿ ಕೆಳಗೆ ಬಿದ್ದು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಬಳಿಕ ಚಿಕಿತ್ಸೆಗಾಗಿ ಹೊಸಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್​ಗೆ ದಾಖಲಿಸಲಾಗಿತ್ತು.‌ ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದಾರೆ. ಈ ದೂರಿನಲ್ಲಿ ಆಕಸ್ಮಿಕ ಘಟನೆ ನಡೆದಿದೆ ಎಂದು ಉಲ್ಲೇಖಿಸಿದ್ದಾರೆ.

ಪ್ರಕರಣಕ್ಕೆ ಟ್ವಿಸ್ಟ್...

ಎರಡನೇ ದೂರಿನಲ್ಲಿ ಗೌಸಿಯಾ ಮತ್ತೊಮ್ಮ ಸಹೋದರ ಮಹಬೂಬ್ ಹುಸೇನ್, ಗಂಡನ ಮನೆಯಲ್ಲಿ ಸಹೋದರಿ ಮಾರಣಾಂತಿಕರ ಹಲ್ಲೆಯಿಂದ ಸಾವನ್ನಪ್ಪಿದ್ದಾಳೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಂಗಿಯ ಮದುವೆ ಸಂದರ್ಭದಲ್ಲಿ 50 ಸಾವಿರ ರೂ. ಹಣ ನೀಡಲಾಗಿತ್ತು.‌ ಕೆಲ ದಿನಗಳ ನಂತರ ತಂಗಿಗೆ ಕರೆ ಮಾಡಿದಾಗ ಅತ್ತೆ-ಮಾವ ಬಂಗಾರದ ನೆಕ್ಲೇಸ್​ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಳು. ಆಗ ಸಮಯದ ಅವಕಾಶ ನೀಡಿ ಎಂದು ಅತ್ತೆ ಹಾಗೂ ಮಾವನವರಿಗೆ ತಿಳಿಸಿದ್ದೆ. ಇದಾದ ಬಳಿಕ ಕೆಲ ದಿನಗಳ ನಂತರ ತಂಗಿಯ ಮಾವ ಕರೆ ಮಾಡಿ, ನಿಮ್ಮ ತಂಗಿ ಬಿದ್ದು ಗಾಯಗಳಾಗಿವೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ಆಗ ತಂಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು. ಮದುವೆಯಾದ ಎರಡು ತಿಂಗಳು 14 ದಿನಗಳಲ್ಲೇ ಮೃತಪಟ್ಟಿದ್ದಾಳೆ.‌ ಈ ಕುರಿತು ತಂಗಿಯ ಸಾವಿಗೆ ನ್ಯಾಯ ಕೊಡಸಬೇಕು ಎಂದು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.

ಪ್ರಕರಣ ಮುಚ್ಚಿ ಹಾಕುವ ಹುನ್ನಾರ...

ಮೊದಲನೇ ದೂರಿನಲ್ಲಿ ಆಕಸ್ಮಿಕ ಸಾವು ಎಂದು ಉಲ್ಲೇಖಿಸಲಾಗಿದೆ. ಗೌಸಿಯಾ ಮೆಟ್ಟಿಲಿಂದ ಕೆಳಗಡೆ ಬಿದ್ದರೆ ಕುತ್ತಿಗೆ ಭಾಗದಲ್ಲಿ ಗಾಯವಾಗಲು ಹೇಗೆ ಸಾಧ್ಯ? ಹಾಗಾಗಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ತಿಳಿದು, ಸಮಗ್ರ ತನಿಖೆ ನಡೆಸಲು ಎರಡನೇ ದೂರನ್ನು ದಾಖಲಿಸಲಾಗಿದೆ.

ಗೌಸಿಯಾಗೆ ಪಾಲಕರು ಇಲ್ಲ.‌ ಸಹೋದರಿಬ್ಬರು ಮಾತ್ರ ಇದ್ದಾರೆ. ಹೀಗಾಗಿ ನವವಿವಾಹಿತೆ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ ಈಟಿವಿ ಭಾರತಕ್ಕೆ ದೂರವಾಣಿ ಸಂಪರ್ಕ‌ದ ಮೂಲಕ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.