ಬಳ್ಳಾರಿ : ದೇಶದ್ರೊಹಿ ಹೇಳಿಕೆ ನೀಡಿದವರಿಗೆ ಜೈಲಿಂದ ಬಿಡುಗಡೆ ಮಾಡಬೇಡಿ. ಹಾಗೊಂದು ವೇಳೆ ಜೈಲಿಂದ ಬಿಡುಗಡೆ ಮಾಡಿದರೆ ಎನ್‌ಕೌಂಟರ್ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ ಬಹಿರಂಗವಾಗಿಯೇ ಘೋಷಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿ, ದೇಶದ್ರೋಹಿ ಘೋಷಣೆ ಕೂಗಿದವರನ್ನ ಎನ್‌ಕೌಂಟರ್ ಮಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ದೇಶದ್ರೋಹಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ ನಾವೇ ಎನ್‌ಕೌಂಟರ್ ಮಾಡ್ತೇವೆ. ಇಲ್ಲವಾದರೆ ಎನ್‌ಕೌಂಟರ್ ಮಾಡಿದವರಿಗೆ 10 ಲಕ್ಷ ರೂ. ಕೊಡ್ತೇವೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.