ಹೊಸಪೇಟೆ: ನಗರದ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತಾ ಅವರ ಎರಡು ಮನೆ ಮೇಲೆ ದಾಳಿ ನಡೆಸಿದ 10ಕ್ಕೂ ಹೆಚ್ಚು ಅಧಿಕಾರಿಗಳ ಎಸ್ಐಟಿ ತಂಡ, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪರಿಶೀಲನೆ ನಡೆಸಿದರು. ಸಂಡೂರ ರಸ್ತೆಯಲ್ಲಿ ವಿವೇಕಾನಂದ ನಗರ ಹಾಗೂ ವಿಜಯನಗರ ಕಾಲೇಜ್ ರಸ್ತೆಯಲ್ಲಿ ಮನೆಗಳಿವೆ. ಆದರೆ, ಮನೆಗಳಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
ರಾಣಿ ಸಂಯುಕ್ತಾ ಅವರು ಕೃಷ್ಣ ಮಿನರಲ್ಸ್ ಗಣಿ ಮಾಲೀಕರು. 2015ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ಎಸ್ಐಟಿ ತಂಡ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ದೂರವಾಣಿ ಮೂಲಕ ರಾಣಿ ಸಂಯುಕ್ತಾ ಅವರನ್ನು ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.