ETV Bharat / state

ನನ್ನ ನೆಟ್​ ಸ್ಪೀಡ್​ ಇರೋದರಿಂದ ಮಾಹಿತಿ ಬೇಗ ಬರುತ್ತೆ: ಸಚಿವ ಶ್ರೀರಾಮುಲು - ಸಚಿವ ಡಾ.ಸುಧಾಕರ್

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವನ್ನಪ್ಪಿದ ಮಹಿಳೆಯ ವರದಿ ಕೊರೊನಾ ಪಾಸಿಟಿವ್​ ಆಗಿರೋ ಮಾಹಿತಿ ಲಭ್ಯವಾಗಿದೆ. ನನ್ನ ನೆಟ್ ಫಾಸ್ಟ್ ಇದೆ. ಆದ್ರೆ, ಸಚಿವ ಡಾ.ಸುಧಾಕರ್​ ಅವರಿಗೆ ಮಾಹಿತಿ ತಡವಾಗಿ ಸಿಕ್ಕಿದೆ ಅಷ್ಟೇ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

aaszss
ಸಚಿವ ರಾಮುಲು
author img

By

Published : Mar 26, 2020, 11:58 PM IST

ಬಳ್ಳಾರಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಂಕಿತ ಕೊರೊನಾದಿಂದ ಸಾವನ್ನಪ್ಪಿದ ಮಹಿಳೆಯ ವರದಿ ಕೊರೊನಾ ಪಾಸಿಟಿವ್​ ಇರುವ ಮಾಹಿತಿ ಲಭ್ಯವಾಗಿದೆ. ನನ್ನ ನೆಟ್ ಫಾಸ್ಟ್ ಇದ್ದು, ಬೇಗ ಮಾಹಿತಿ ಸಿಕ್ಕಿದೆ. ಆದ್ರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಸ್ವಲ್ಪ ತಡವಾಗಿ ಮಾಹಿತಿ ಸಿಕ್ಕಿದೆ​ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಶ್ರೀರಾಮುಲು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ಅವರು ಚಿಕ್ಕಬಳ್ಳಾಪುರ ಮಹಿಳೆಯಲ್ಲಿ ಕೊರೊನಾ ವೈರಸ್ ಕನ್​ಫರ್ಮ್ ಆಗಿಲ್ಲ ಎಂಬುದರ ಕುರಿತು ನಗರದಲ್ಲಿಂದು ಪ್ರತಿಕ್ರಿಯಿಸಿದ ಶ್ರೀರಾಮುಲು, ಸುಧಾಕರ್​ ನನ್ನ ತಮ್ಮನಂತೆ. ಅವರು ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ವೈದ್ಯಕೀಯ ಲೋಕದಲ್ಲಿ ಪರಿಣಿತಿ ಹೊಂದಿದ್ದಾರೆ. ಅವರು ಯಾವುದೇ ವಿಚಾರವಾಗಿ ಮಾತನಾಡುವಾಗ ಆಳವಾಗಿ ವಿಷಯದ ಬಗ್ಗೆ ತಿಳಿದುಕೊಂಡು ಮಾತನಾಡುತ್ತಾರೆ. ಆದ್ರೆ ನಾವು ಜನರ ನಾಡಿಮಿಡಿತ ಅರಿತು ಮಾತನಾಡುತ್ತೇವೆ. ನಮ್ಮ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲವೆಂದು ಸ್ಪಷ್ಟಪಡಿಸಿದರು.

ನನಗೆ ಬಂದಿರೋ ಮಾಹಿತಿಯನ್ನು ನಾನು ಹೇಳುವೆ. ನಾನೇ ಸುಧಾಕರ್​ ಅವರಿಗೆ ಕರೆ ಮಾಡಿ ಮಾಹಿತಿ ನೀಡುವೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.