ETV Bharat / state

ಜನವರಿ 31ರಿಂದ ಪಲ್ಸ್​ ಪೋಲಿಯೊ ಲಸಿಕಾ ಅಭಿಯಾನ

author img

By

Published : Jan 29, 2021, 6:39 AM IST

ಪ್ರಸ್ತುತ ಪಲ್ಸ್​ ಪೋಲಿಯೊ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 5 ವರ್ಷದೊಳಗಿನ 3,24,818 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ನಗರ ಪ್ರದೇಶದಲ್ಲಿ 549 ಮತ್ತು ಗ್ರಾಮೀಣ ಪ್ರದೇಶದಲ್ಲಿ 1357 ಲಸಿಕಾ ಬೂತ್‍ಗಳು ಸೇರಿದಂತೆ ಜಿಲ್ಲೆಯಲ್ಲಿ 1906 ಲಸಿಕಾ ಬೂತ್‍ಗಳನ್ನು ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Pulse polio vaccine campaign from January 31st
ಜನವರಿ 31ರಿಂದ ಪಲ್ಸ್​ ಪೋಲಿಯೊ ಲಸಿಕಾ ಅಭಿಯಾನ

ಬಳ್ಳಾರಿ: ಪಲ್ಸ್​ ಪೋಲಿಯೊ ಲಸಿಕಾ ಅಭಿಯಾನ ಜನವರಿ 31ರಿಂದ ಫೆಬ್ರವರಿ 3 ರವರೆಗೆ ನಾಲ್ಕು ದಿನಗಳ ಕಾಲ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್​ ಪೋರ್ಸ್ ಸಮಿತಿ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ,ಜಿಲ್ಲೆಯಲ್ಲಿ ಜನವರಿ 31ರಿಂದ ಫೆಬ್ರವರಿ 3 ರವರೆಗೆ ನಾಲ್ಕು ದಿನಗಳ ಕಾಲ ಪಲ್ಸ್​ ಪೋಲಿಯೊ ಲಸಿಕಾ ಅಭಿಯಾನ ನಡೆಯಲಿದ್ದು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. 5 ವರ್ಷದೊಳಗಿನ ಯಾವುದೇ ಮಗು ಕೂಡ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಪಲ್ಸ್​ ಪೋಲಿಯೊ ಲಸಿಕಾ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ನಾಲ್ಕು ದಿನಗಳ ಕಾಲ ಈ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಬೇಕಾದ ಅಗತ್ಯ 132 ವಾಹನಗಳ ವ್ಯವಸ್ಥೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡಲೇ ಮಾಡುವಂತೆ ಸೂಚನೆ ನೀಡಿದರು. ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಪ್ಯಾಕ್‍ಗಳನ್ನು ತಯಾರಿಸಲು ನಿರಂತರ ವಿದ್ಯುಚ್ಛಕ್ತಿಯ ಅವಶ್ಯಕತೆ ಇರುವುದರಿಂದ ನಗರ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರದೇಶಗಳಲ್ಲಿ ವಿದ್ಯುತ್​ನ್ನು ನಿರಂತರವಾಗಿ ಸರಬರಾಜು ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಓದಿ : ಹಿಂದೂ ಸ್ಮಶಾನ ಸ್ವಚ್ಛಗೊಳಿಸುವ ಮುಸ್ಲಿಂ ಮಹಿಳೆ: ಏಕತೆ ಬಲಪಡಿಸಲು ನಾರಿಯ ಪ್ರಯತ್ನ!

1720 ಮನೆ ಭೇಟಿ ತಂಡಗಳು, 103 ಟ್ರಾನ್ಸಿಟ್ ತಂಡಗಳು, 22 ಮೊಬೈಲ್ ತಂಡಗಳು, ಮೈಗ್ರಟರಿ ಮತ್ತು ಹೈರಿಸ್ಕ್ ಏರಿಯಾದಲ್ಲಿ 602 ತಂಡಗಳು, ಹೈರಿಸ್ಕ್ ಏರಿಯಾದಲ್ಲಿ ಮನೆ ಮನೆ ಭೇಟಿ ಮಾಡಲು 166 ತಂಡಗಳು ಸೇರಿದಂತೆ ಒಟ್ಟು 1845 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರ್​​ಸಿಹೆಚ್ ಅಧಿಕಾರಿ ಡಾ.ಅನಿಲಕುಮಾರ್ ಸಭೆಗೆ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.