ETV Bharat / state

ವಿವಿಧ ಬೇಡಿಕೆ ಈಡೇರುವಂತೆ ನೂರಾರು ಅಂಚೆ ನೌಕರರಿಂದ ಕೇಂದ್ರ ಸರ್ಕಾರದ ವಿರುಧ್ಧ ಪ್ರತಿಭಟನೆ - ಅಖಿಲ ಭಾರತೀಯ ಅಂಚೆ ನೌಕರರ ಸಂಘ

ನಗರದ ಜಿಲ್ಲಾ ಅಂಚೆ ಕಚೇರಿಯ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೂರಾರು ಅಂಚೆ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Postal employees protest
ಅಂಚೆ ನೌಕರರ ಪ್ರತಿಭಟನೆ
author img

By

Published : Nov 26, 2020, 5:23 PM IST

Updated : Nov 26, 2020, 10:21 PM IST

ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ಅಂಚೆ ನೌಕರರ ಸಂಘ ಮತ್ತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ನೇತೃತ್ವದಲ್ಲಿಂದು ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ನಗರದ ಜಿಲ್ಲಾ ಅಂಚೆ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಅಂಚೆ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಈಟಿವಿ ಭಾರತದೊಂದಿಗೆ ಅಖಿಲ ಭಾರತೀಯ ಅಂಚೆ ನೌಕರರ ಸಂಘದ ಬಳ್ಳಾರಿ ವಿಭಾಗಿಯ ಕಾರ್ಯದರ್ಶಿ ಅಲ್ಲಾ ಸಾಬ್ ಮಾತನಾಡಿ, ಕೇಂದ್ರ ಸರ್ಕಾರವು ಜಿ.ಡಿ.ಎಸ್ ನೌಕರರ 7ನೇ ವೇತನ ಆಯೋಗ (ಕಮಲೇಶ್ ಚಂದರ ವರದಿ) ಸಂಪೂರ್ಣವಾಗಿ ಜಾರಿಗೊಳಿಸದೇ, ನೌಕರರಿಗೆ ಸವಲತ್ತುಗಳನ್ನು ಒದಗಿಸದೇ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಅನೇಕ ಇಲಾಖೆಗಳನ್ನು ಖಾಸಗೀಕರಣಗೊಳಿಸಿ ನೌಕರನ್ನು ಬೀದಿಪಾಲು ಮಾಡುತ್ತಿದೆ. ಕಮಲೇಶ್ ಚಂದ್ರ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ ಗ್ರಾಮೀಣ ಅಂಚೆ ನೌಕರರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಹಾಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ವಿವಿಧ ಬೇಡಿಕೆ ಈಡೇರುವಂತೆ ನೂರಾರು ಅಂಚೆ ನೌಕರರಿಂದ ಕೇಂದ್ರ ಸರ್ಕಾರದ ವಿರುಧ್ಧ ಪ್ರತಿಭಟನೆ

ಅಂಚೆ ನೌಕರರ ಬೇಡಿಕೆಗಳು :

  • ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರೆಂದು ಘೋಷಸಬೇಕು.
  • ಸೇವಾ ಅವಧಿಯಲ್ಲಿ ಮೂರು ಕಾಲ ನಿಗದಿ 12 ವರ್ಷ, 24 ವರ್ಷ 36 ಬಡ್ತಿ ನೀಡಬೇಕು.
  • ಕೇಂದ್ರ ಸರ್ಕಾರಿ ಅಂಚೆ ನೌಕರರಿಗೆ ನೀಡುವ ವೈದ್ಯಕೀಯ ಸೌಲಭ್ಯಗಳನ್ನು ಗ್ರಾಮೀಣ ಅಂಚೆ ನೌಕರರಿಗೆ ವಿಸ್ತರಿಸಬೇಕು.
  • 180 ದಿವಸಗಳ ರಜಾ ನಗದೀಕರಣಕ್ಕೆ ಮಂಜೂರಾತಿ ನೀಡಬೇಕು.
  • ತಡೆಹಿಡಿದ ತುಟ್ಟಿ ಭತ್ಯೆಯನ್ನು ಬಿಡುಗಡೆಗೊಳಿಸಬೇಕು.
  • ಹಬ್ಬದ ಮುಂಗಡ ಹಣವನ್ನು ಬಡ್ಡಿ ರಹಿತವಾಗಿ ಜಿ.ಡಿ.ಎಸ್ ನೌಕರರಿಗೆ ನೀಡಬೇಕು.
  • ಸಿಂಗಲ್ ಹ್ಯಾಂಡ್ ಬಿ.ಪಿ.ಎಂ ಇದ್ದವರಿಗೆ ಕಂಬೈಂಡ್ ಡ್ಯೂಟಿ ಅಲೊವೆಲ್ಸ್ ನೀಡಬೇಕು.
  • ಗ್ರೂಪ್ ಇನ್ಸೂರೆನ್ಸ್ ಮೊತ್ತವನ್ನು ಹೆಚ್ಚಿಸಬೇಕು‌
  • 20 ರಷ್ಟು ಜಿ.ಡಿ.ಎಸ್ ನೌಕರರಿಗೆ ಅಂಚೆ ಸಹಾಯಕ ಹುದ್ದೆಗೆ ಮೀಸಲಿಡಬೇಕು.
  • ಕಾನೂನು ಬದ್ಧವಲ್ಲದ ಫೆಡಿಲಿಟಿ ಬಾಂಡ್ ನೀತಿ ರದ್ದಗೊಳಿಸಬೇಕು.
  • ಅವೈಜ್ಞಾನಿಕ ಗುರಿ ನಿಗದಿ ನಿಲ್ಲಿಸಬೇಕು. ಕೆಲಸಕ್ಕೆ ತಕ್ಕಂತೆ ಸಮಯ ಆಧಾರಿತ ನೀತಿಯನ್ನು ಅನುಸರಿಸಬೇಕು.
  • ಆನ್ ಲೈನ್ ಮೆಂಬರಗ ಶಿಫ್ ಪರಿಶೀಲನೆ ಆದೇಶವನ್ನು ರದ್ದು ಮಾಡಬೇಕು. ಮೊದಲಿನಂತೆ ಜಾರಿಗೊಳಿಸಿ.

ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಅಂಚೆ ಇಲಾಖೆಯ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

Last Updated : Nov 26, 2020, 10:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.