ETV Bharat / state

ಬಳ್ಳಾರಿ ಲಾಡ್ಜ್​​​ನಲ್ಲಿ ಜೂಜಾಟ: 46 ಜನರನ್ನು ಬಂಧಿಸಿದ ಪೊಲೀಸರು - ಬಳ್ಳಾರಿಯ ಲಾಡ್ಜ್​​​ನಲ್ಲಿ ಜೂಜಾಟ

ಬಳ್ಳಾರಿ ನಗರದಲ್ಲಿರುವ ಲಾಡ್ಜ್​ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ 46 ಜನರನ್ನು ಬಂಧಿಸಿದ್ದಾರೆ.

ಬಳ್ಳಾರಿ ಲಾಡ್ಜ್​​​ನಲ್ಲಿ ಜೂಜಾಟ
Police arrested 46 people playing gambling at the lodge at Bellary
author img

By

Published : Jan 14, 2021, 6:38 PM IST

ಬಳ್ಳಾರಿ: ಲಾಡ್ಜ್​​​ನಲ್ಲಿ ಜೂಜಾಟದಲ್ಲಿ ತೊಡಗಿದ್ದ 46 ಜನರನ್ನು ಬಂಧಿಸಿ ಅವರಿಂದ 12 ಲಕ್ಷಕ್ಕೂ ಅಧಿಕ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

money
ಪೊಲೀಸರು ವಶಕ್ಕೆ ಪಡೆದಿರುವ ನಗದು

ನಗರದ ಕಾಳಮ್ಮ ಸ್ಟ್ರೀಟ್ ನಲ್ಲಿರುವ ರಾಮೇಶ್ವರಿ ಹೋಟೆಲ್​​​​ನಲ್ಲಿ ಅಂದರ್ ಬಾಹರ್, ಇಸ್ಪೀಟ್, ಜೂಜಾಟ ನಡೆಯುತ್ತಿತ್ತು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸರು, ​ಪೊಲೀಸ್ ಅಧೀಕ್ಷಕ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆಟದಲ್ಲಿ ತೊಡಗಿದ್ದ 46 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12 ಲಕ್ಷಕ್ಕೂ ಅಧಿಕ ನಗದು, ಒಂದು ಕಾರು, 9 ಬೈಕ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಂಪನಿ ಸಿಇಒ ಸೋಗಿನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ 28 ಲಕ್ಷ ದೋಖಾ

ಈ ಕುರಿತಂತೆ ನಗರದ ಬ್ರೂಸಪೇಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.