ಬಳ್ಳಾರಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿಗೆ ಆರ್ಯವೈಶ್ಯ ಸಮಾಜದಿಂದ ಸನ್ಮಾನಿಸಲಾಯಿತು.
ನಗರದ ಬಲಿಜ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ಡಾ. ಡಿ.ಎಲ್. ರಮೇಶ ಗೋಪಾಲ, ಸೊಂತ ಗಿರಿಧರ ಅವರು ಮಂಜಮ್ಮ ಜೋಗತಿ ಅವರಿಗೆ ಮೈಸೂರು ಪೇಟ ತೋಡಿಸಿ ಆತ್ಮೀಯವಾಗಿ ಸನ್ಮಾನಿಸಿದ್ರು. ಅಲ್ಲದೇ, ಕೊರೊನಾ ವಾರಿಯರ್ಸ್ಗಳಾಗಿ ಸೇವೆಗೈದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಡಾ. ಉಮಾ ಶಂಕರ, ಡಾ. ಹರೀಶ, ಪಿ. ಸುಬ್ರಮಣ್ಯಂ, ರಾಮಕೃಷ್ಣ ಅವರನ್ನೂ ಕೂಡ ಈ ವೇಳೆ ಸನ್ಮಾನಿಸಲಾಯಿತು.
ಓದಿ: 'ಜಗವೆಲ್ಲಾ ಹರಡಿತು ಕಸ್ತೂರಿ ಮಣ್ಣಿನ ಗುಲಾಬಿ ಕಂಪು'.. ಹಳ್ಳಿಯಿಂದ ವಿದೇಶದತ್ತ!
ಆರ್ಯವೈಶ್ಯ ಸಮಾಜದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಮಂಜಮ್ಮ ಜೋಗತಿ, ನಾನು ಜೀವನದಲ್ಲಿ ತುಂಬಾ ಕಷ್ಟಪಟ್ಟಿರುವೆ. ಹಾಗಾಗಿ, ಈ ಮಟ್ಟಕ್ಕೆ ಬೆಳದಿದ್ದೇನೆ. ನನ್ನ ಈ ಮಟ್ಟದ ಸಾಧನೆಗೆ ನನ್ನಲ್ಲಿರುವ ಕಲೆಯೇ ಕಾರಣ ಎಂದು ತಿಳಿಸಿದರು.