ವಿಜಯನಗರ: ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಕೊಟ್ಟೂರು ತಾಲೂಕಿನ ಹಿರೇವಡ್ರಹಳ್ಳಿ ಕ್ರಾಸ್ ಬಳಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಚಿನ್ನೇನಹಳ್ಳಿ ತಾಂಡದ ಮಂಜುನಾಯ್ಕ( 45) ಸಾವಿಗೀಡಾಗಿದ್ದು, ಹಿಂಬದಿ ಸವಾರ ಲೋಕೇಶ (18 ) ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.
ಲೋಕೇಶನಿಗೆ ಪಟ್ಟಣದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ದಾವಣಗೆರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ](https://etvbharatimages.akamaized.net/etvbharat/prod-images/15319071_713_15319071_1652870068600.png)
ಇದನ್ನೂ ಓದಿ: ಮಾನಭಂಗಕ್ಕೆ ಯತ್ನಿಸಿ ಪ್ರೀತಿಸಿದ ಹುಡುಗಿಯಿಂದ ದೂರವಾದ ಯುವಕ: 6 ತಿಂಗಳ ಬಳಿಕ ಕೊಲೆ ಯತ್ನ