ETV Bharat / state

ಬಳ್ಳಾರಿಯಲ್ಲಿ ವಯೋವೃದ್ಧ ಕಾಣೆ.... ಮಾಹಿತಿ ಸಿಕ್ಕಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆ! - ballary man missing case latest news

ಸಂಡೂರು ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 84 ವರ್ಷದ ಬಸಯ್ಯ ಎಂಬುವವರು ಕಾಣೆಯಾಗಿದ್ದು, ಈ ಕುರಿತು ಮಾಹಿತಿ ಸಿಕ್ಕಲ್ಲಿ ಪೊಲೀಸ್​ ಠಾಣೆಯನ್ನು ಸಂಪರ್ಕಿಸಬೇಕು ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Old age man missing in Bellary
ಬಳ್ಳಾರಿಯಲ್ಲಿ ವಯೋವೃದ್ಧ ಕಾಣೆ!
author img

By

Published : Feb 11, 2020, 8:04 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 84 ವರ್ಷದ ಬಸಯ್ಯ ಎಂಬುವವರು ಫೆ.6 ರಿಂದ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.6ರ ಮಧ್ಯಾಹ್ನ ತೋರಣಗಲ್ಲಿನ ವಿದ್ಯಾನಗರಟೌನ್ ಶಿಪ್‌ನ ತನ್ನ ತಮ್ಮನ ಮನೆ ಮುಂದೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು, ನಂತರ ಎದ್ದು ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ದೂರು ದಾಖಲಾಗಿದೆ.

ವಯೋವೃದ್ಧನ ಚಹರೆ ಗುರುತು : 5.4 ಅಡಿ ಎತ್ತರ, ಕೋಲುಮುಖ, ಸಾಧಾರಣ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಎಡಕಾಲಿನ ತೊಡೆಯಲ್ಲಿ ಕಪ್ಪುಮಚ್ಚೆ ಇರುತ್ತದೆ. ಕೊರಳಲ್ಲಿ ಶಿವದಾರದಲ್ಲಿ ಹಾಕಿರುವ ಬೆಳ್ಳಿ ಲಿಂಗದ ಕಾಯಿ ಇರುತ್ತದೆ. ತುಂಬು ತೋಳಿನ ಬಿಳಿ ಬಣ್ಣದ ಬನಿಯನ್, ಬಿಳಿ ಬಣ್ಣದದೋತಿ (ಪಂಚೆ) ಧರಿಸಿದ್ದು, ಕಾಲಲ್ಲಿ ಬಿಳಿ ಮತ್ತು ನೀಲಿ ಬಣ್ಣದ ಲೆದರ್‌ಚಪ್ಪಲಿ ಹಾಕಿರುತ್ತಾರೆ, ಕನ್ನಡ ಭಾಷೆಯನ್ನು ಮಾತನಾಡುತ್ತಾನೆ.

ಈ ವೃದ್ಧನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆಗೆ ಅಥವಾ ತೋರಣಗಲ್ಲು ಪೊಲೀಸ್ ಠಾಣೆಯ ದೂ.ಸಂ.08395-250100, 9480803062, ಸಂಡೂರು ಠಾಣೆಯ ದೂ.ಸಂ.08395-260100, 9480803036, ಡಿವೈ.ಎಸ್.ಪಿ ಕೂಡ್ಲಿಗಿ ಠಾಣೆಯ ದೂ.ಸಂ 08391-220326 ಅಥವಾ ಎಸ್.ಪಿ ಬಳ್ಳಾರಿ ಕಚೇರಿಯ ದೂ.ಸಂ.08392-258300, ಕಂಟ್ರೋಲ್ ರೂಂ 08392-279100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.