ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದ ವಿವಿಧೆಡೆ ಶುಕ್ರವಾರ ದಾಳಿ ನಡೆಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ವರ ನೇತೃತ್ವದ ತಂಡ ಒಟ್ಟರೆಯಾಗಿ 500 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ.
ಶುಕ್ರವಾರ ಪಟ್ಟಣದ ವಿವಿಧ ಅಂಗಡಿಗಳು ಹಾಗೂ ಹೋಟೆಲ್ಗಳ ಮೇಲೆ ಕಾರ್ಯಾಚರಣೆ ನಡೆಸಿದ ಮುಖ್ಯಾಧಿಕಾರಿ ನಾಗೇಶ್ವರ ಹಾಗೂ ಮತ್ತವರ ತಂಡ ಅಪಾರ ಪ್ರಮಾಣದ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಪ್ಲಾಸ್ಟಿಕ್ನಿಂದಾಗುವ ಅನಾಹುತಗಳ ಬಗ್ಗೆ ತಿಳಿಸಿ ಇನ್ಮುಂದೆ ಅದನ್ನ ಬಳಸದಂತೆ ಖಡಕ್ ಸೂಚನೆ ನೀಡಿದ್ದಾರೆ.