ETV Bharat / state

ಹೊಸಪೇಟೆ-ಮಂಗಳೂರು ಮಧ್ಯೆ ನೂತನ ರೈಲು ಪ್ರಾರಂಭ ಮಾಡುವಂತೆ ಆಗ್ರಹ

ಹೊಸಪೇಟೆ-ಮಂಗಳೂರು ಮಧ್ಯೆ ನೂತನ ರೈಲು ಪ್ರಾರಂಭ ಮಾಡುವಂತೆ ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಹೊಸಪೇಟೆ ರೈಲ್ವೆ ನಿಲ್ದಾಣ ಅಧೀಕ್ಷಕ ಉಮೇಶ್ ಅವರಿಗೆ ಮನವಿ ಸಲ್ಲಿಸಿದೆ.

New train between Hosapete-Mangalore
ಹೊಸಪೇಟೆ-ಮಂಗಳೂರು ಮಧ್ಯೆ ನೂತನ ರೈಲು ಪ್ರಾರಂಭ ಮಾಡುವಂತೆ ಆಗ್ರಹ
author img

By

Published : Oct 17, 2020, 6:48 PM IST

ಹೊಸಪೇಟೆ: ಹೊಸಪೇಟೆ-ಮಂಗಳೂರು ಮಧ್ಯೆ ನೂತನ ರೈಲು ಪ್ರಾರಂಭ ಮಾಡಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಹೊಸಪೇಟೆ ನಗರದ ರೈಲ್ವೆ ನಿಲ್ದಾಣ ಅಧೀಕ್ಷಕ ಉಮೇಶ್ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಹೊಸಪೇಟೆ-ಮಂಗಳೂರು ನೂತನ ರೈಲಿನ ಆರಂಭದಿಂದ ವಿಶ್ವಪ್ರಸಿದ್ದ ಹಂಪಿ, ಬೇಲೂರು, ಶ್ರವಣಬೆಳಗೋಳ, ಹಳೇಬೀಡು, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಉಡುಪಿ, ಮಂಗಳೂರು ನಡುವೆ ನೇರ ಸಂಪರ್ಕ ಉಂಟಾಗಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ.‌ ಹೀಗಾಗಿ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೆಕೆಂದು ಒತ್ತಾಯಿಸಿದರು.

ಇನ್ನು, ಹೊಸಪೇಟೆ ಮಾರ್ಗವಾಗಿ ಬೆಳಗಾವಿ-ಬೀದರ್ ಹೊಸ ರೈಲು ಆರಂಭಿಸಬೇಕು. ಜೊತೆಗೆ ಮುಂಬೈ-ಗದಗ ರೈಲು ಸಂಖ್ಯೆ 11139-40 ಹಾಗೂ ಸೊಲ್ಲಾಪುರ-ಗದಗ ರೈಲು ಸಂಖ್ಯೆ 71303-04 ರೈಲುಗಳನ್ನು ಹೊಸಪೇಟೆ ವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.