ETV Bharat / state

ಬಳ್ಳಾರಿಯಲ್ಲಿ ಹರಿಯಿತು ನೆತ್ತರು... ರೌಡಿಶೀಟರ್​ನ ಬರ್ಬರ ಕೊಲೆ - ರೌಡಿ ಕೊಲೆ

ಬಳ್ಳಾರಿಯ ದೇವಿನಗರದ ನಾಲ್ಕನೇಯ ಅಡ್ಡರಸ್ತೆಯ ನಿವಾಸಿ ಯಲ್ಲಪ್ಪನೆಂಬ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

murder-of-rowdy-sheeter-with-a-deadly-weapon-at-bellary

author img

By

Published : Feb 25, 2020, 11:37 PM IST

ಬಳ್ಳಾರಿ: ನಗರದಲ್ಲಿ ಮಂಗಳವಾರ ನೆತ್ತರು ಹರಿದಿದೆ. ರೌಡಿಶೀಟರ್​ವೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ.

ಬಳ್ಳಾರಿಯ ದೇವಿನಗರದ ರೌಡಿಶೀಟರ್ ಕೊಲೆ

ದೇವಿನಗರ ನಿವಾಸಿ ಯಲ್ಲಪ್ಪ ಎಂಬಾತ ಕೊಲೆಗೀಡಾಗಿರುವ ರೌಡಿ ಶೀಟರ್​. ಎರಡು ವರ್ಷಗಳ ಹಿಂದಷ್ಟೇ ಹಾಲಿ ಬಿ. ಶ್ರೀರಾಮುಲು ಅವರ‌ ಆಪ್ತರಾಗಿದ್ದ ರೌಡಿ ಶೀಟರ್ ಬಂಡಿ‌ ರಮೇಶ ಎಂಬಾತನನ್ನು ನಗರ ಹೊರವಲಯದ ಡಾಬಾವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ರೌಡಿಶೀಟರ್​ ಯಲ್ಲಪ್ಪನು ಬಂಡಿ‌ ರಮೇಶ ಕೊಲೆ ಪ್ರಕರಣದ ಪ್ರಮುಖ‌ ಆರೋಪಿಯಾಗಿದ್ದ. ಈಗ ಯಲ್ಲಪ್ಪನ ಹೆಣ ಉರುಳಿಸಿದ್ದು ರಮೇಶ್​ ಕಡೆಯ ಗ್ಯಾಂಗ್​ನವರಾ?, ಇದು ಪ್ರತೀಕಾರದ ಕೊಲೆನಾ ಎಂಬ ಶಂಕೆ ವ್ಯಕ್ತವಾಗಿದೆ.

ಮಾರಣಾಂತಿಕ ಹಲ್ಲೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯಲ್ಲಪ್ಪನನ್ನು ಸಂಬಂಧಿಕರು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಆತನನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಘಟನಾ‌ ಸ್ಥಳಕ್ಕೆ ಬಳ್ಳಾರಿ ಅಡಿಷನಲ್ ಎಸ್ಪಿ ಲಾವಣ್ಯ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.