ಬಳ್ಳಾರಿ: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ತನ್ನ ಮಕ್ಕಳಿಬ್ಬರನ್ನು ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಮೇದಕಾಕೇತಯ್ಯ ನಗರದಲ್ಲಿ ನಡೆದಿದೆ.
ನಗರದ ಮೇದಕಾಕೇತಯ್ಯ ನಗರದ ನಿವಾಸಿ ಲಕ್ಷ್ಮೀ ತನ್ನ ಇಬ್ಬರು ಮಕ್ಕಳಾದ ಮೂರು ವರ್ಷದ ಮಗ ಉದಯ್ ಮತ್ತು ಒಂದೂವರೆ ವರ್ಷದ ಭೂಮಿಕಾಳನ್ನ ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಸಹ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಬಗ್ಗೆ ಬಳ್ಳಾರಿ ಜಿಲ್ಲೆಯ ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಈ ಘಟನೆ ನೋಡಿ ನಮಗೂ ಬಹಳ ನೋವಾಗಿದೆ. ಈ ಘಟನೆಗೆ ಕಾರಣವೇನೆಂಬುದನ್ನು ತನಿಖೆಯ ಮೂಲಕ ಪತ್ತೆ ಮಾಡುವ ಕೆಲಸ ಮಾಡುತ್ತವೆ ಎಂದು ಹೇಳಿದ್ದಾರೆ. ಸ್ಥಳಕ್ಕೆ ಕೌಲ್ ಬಜಾರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.