ETV Bharat / state

ಮಂಜಮ್ಮ ಜೋಗತಿ ಆತ್ಮಕಥನ ಗುಲ್ಬರ್ಗ ವಿಶ್ವವಿದ್ಯಾಲಯದ ಪಠ್ಯಕ್ಕೆ ಆಯ್ಕೆ! - ಮಂಜಮ್ಮ ಜೋಗತಿ ಸುದ್ದಿ

ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಆತ್ಮಕಥನ "ನಡುವೆ ಸುಳಿವ ಹೆಣ್ಣು" ಪುಸ್ತಕವು ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎಸ್ಸಿ ಬೇಸಿಕ್ ಪಠ್ಯಕ್ಕೆ ಆಯ್ಕೆಯಾಗಿದೆ.‌

hosapete
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ
author img

By

Published : Mar 5, 2021, 9:31 AM IST

ಹೊಸಪೇಟೆ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಆತ್ಮಕಥನ "ನಡುವೆ ಸುಳಿವ ಹೆಣ್ಣು" ಪುಸ್ತಕವು ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎಸ್ಸಿ ಬೇಸಿಕ್ ಪಠ್ಯಕ್ಕೆ ಆಯ್ಕೆಯಾಗಿದೆ.‌ ಇದು ತೃತೀಯ ಲಿಂಗಿಯಾದ ಮಂಜಮ್ಮ ಜೋಗತಿ ಅವರ ಜೀವನಕ್ಕೆ ಸಂದ ಗೌರವವಾಗಿದೆ.

ಆತ್ಮಕಥನ ಪುಸ್ತಕವನ್ನು ಹೊಸಪೇಟೆಯ ಪಲ್ಲವ ಪ್ರಕಾಶನ ಮುದ್ರಣ ಹಾಗೂ ನಿರೂಪಣೆಯನ್ನು ಅರುಣ ಜೋಳದಕೂಡ್ಲಿಗಿ ಅವರು ಮಾಡಿದ್ದಾರೆ. ಕೆಳ ತಿಂಗಳ ಹಿಂದೆ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿತ್ತು. ಈಗ ಗುಲ್ಬರ್ಗ ವಿಶ್ವವಿದ್ಯಾಲಯದ ಪಠ್ಯಕ್ಕೆ ಆಯ್ಕೆಯಾಗುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಆತ್ಮಕಥನ ಪುಸ್ತಕ 214 ಪುಟಗಳನ್ನು ಒಳಗೊಂಡಿದೆ. ಮುನ್ನುಡಿಯನ್ನು ಬರಗೂರ ರಾಮಚಂದ್ರಪ್ಪ ಹಾಗೂ ಹಿನ್ನುಡಿಯನ್ನು ಸಬಿಹಾ ಭೂಮಿಗೌಡ ಬರೆದಿದ್ದಾರೆ. ಪುಸ್ತಕ 31 ಅಧ್ಯಾಯಗಳಿಂದ ಕೂಡಿದೆ. ಜೋಗತಿ ಮಂಜಮ್ಮ ಅನುಭವಿಸಿದ ಕಹಿ ಘಟನೆಗಳಿಗೆ ಅಕ್ಷರ ರೂಪವನ್ನು ನೀಡಲಾಗಿದೆ‌. ವಿದ್ಯಾರ್ಥಿಗಳಿಗೆ ಮಾದರಿಯಾಗಲೆಂದು ಈಗ ಪಠ್ಯಕ್ಕೆ ಸೇರ್ಪಡೆಗೊಳಿಸಲಾಗುತ್ತದೆ.

ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ

ಜೋಗಿ ಬಳಗ ಕಾಗಿ ಬಳಗ, ಇಪ್ಪತ್ತೊಂದ್ ಜನ ಮಕ್ಳಲ್ಲಿ, ನಾನು ಎಷ್ಟನೆಯವನೋ ಗೊತ್ತಿಲ್ಲ.., ಶಿವಗಂಗಮ್ಮ ಎಂಬ ಚಿಕ್ಕಮ್ಮ, ಒಳಗಣ ಹೆಣ್ಣಿನ ಮೊಳಕೆ, ಪಿಗ್ಮಿ ಏಜೆಂಟ್ ಮತ್ತು ಗಾಂಧಿ ಜೋಗತಿ, ನಾನು ಸಮುದ್ರದೊಳಗಿನ ಗಿಡ, ಹುಟ್ಟಿದ ಮನೆಯಿಂದ ಹೊರ ಹಾಕಿದ್ದು, ಮತ್ತೇರಿದ ಕಾಮುಕರ ಕೈಯಲ್ಲಿ ಸೆಣಸಾಟ ಸೇರಿದಂತೆ ಹಲವಾರು ಅಧ್ಯಾಯಗಳನ್ನು ಆತ್ಮಕಥನ ಪುಸ್ತಕದಲ್ಲಿ ಕಾಣಬಹುದಾಗಿದೆ.

ಈ ಹಿಂದೆ ವಿಜಯಪುರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಅರಿವು ಪಠ್ಯದಲ್ಲಿ ಮಂಜಮ್ಮ ಜೋಗತಿ ಅವರ ಜೀವನ ಚರಿತ್ರೆ ಸೇರ್ಪಡೆಗೊಳಿಸಲಾಗಿತ್ತು. ವಿವಿಯ 5 ನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಆತ್ಮಕಥನವನ್ನು ಪ್ರಕಟಿಸಲಾಗಿತ್ತು. ಅರಿವು-05 ಪಠ್ಯ ಪುಸ್ತಕದ ಸಂಪಾದಕೀಯ ವಿಭಾಗದಲ್ಲಿ ಪ್ರೊ.ಮಹೇಶ, ಚಿಂತಾಮಣಿ, ಡಾ.ವೀನಾಕ್ಷಿ ಬಾಳಿ, ಡಾ.ಈಶ್ವರಯ್ಯ ಮಠ ಮತ್ತು ಡಾ.ನಾಗೇಂದ್ರ ಮಸೂತಿ ಅವರು ಕೆಲಸ ಮಾಡಿದ್ದರು. ಮಂಜಮ್ಮ ಜೋಗತಿ ಆತ್ಮಕಥನದ ಅನಾವರಣ ತೆಲೆಬರಹದಡಿ ವಿಷಯವಿದೆ. ಡಾ.ಚಂದ್ರಪ್ಪ ಸೊಬಟಿ ನಿರೂಪಣೆ ಮಾಡಿದ್ದರು.

ಆಂಧ್ರಪ್ರದೇಶದ ಮಾಸಿಕ ಪತ್ರಿಕೆಯೊಂದರಲ್ಲಿ ಜೋಗತಿ ಮಂಜಮ್ಮ ಎಂಬ ಶೀರ್ಷಿಕೆಯಡಿ ಆತ್ಮಕಥನ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದೆ. ಅಲ್ಲಿನ ಜನರು ಧಾರಾವಾಹಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈಗ ಸಣ್ಣ ಮನೆಯಲ್ಲಿ ಜೋಗತಿ ಮಂಜಮ್ಮ ಅವರು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಅವರ ಜತೆಯಲ್ಲಿ ದ್ಯಾವಮ್ಮ ಹಾಗೂ ಗೌರಮ್ಮ ಜೋಗತಿ ಜತೆಯಲ್ಲಿದ್ದಾರೆ. ಆ ಮನೆಗೆ ತಿಂಗಳಿಗೆ 1500 ರೂ. ಬಾಡಿಗೆ ಹಣವನ್ನು ಪಾವತಿಸುತ್ತಿದ್ದಾರೆ. ಸರಕಾರ ಯೋಜನೆಗಳನ್ನು ಬಳಸಿಕೊಂಡು ತಮ್ಮ ಜಾಗದಲ್ಲಿ ಮನೆಯನ್ನು ನಿರ್ಮಿಸುತ್ತಿದ್ದು. ಅದು ಇನ್ನು ಪೂರ್ಣಗೊಂಡಿಲ್ಲ. ಇಂತಸ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಧನೆಯ ಶಿಖರವನ್ನು ಏರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.