ETV Bharat / state

ಬಳ್ಳಾರಿಯಲ್ಲಿ ಲಾಕ್​ಡೌನ್​ ಉಲ್ಲಂಘನೆ: ಜಾಗಿಂಗ್​, ವಾಕಿಂಗ್​ ಎಂದು ರಸ್ತೆಯಲ್ಲಿ ಓಡಾಟ

ಜನರಿಗೆ ಉಪಯೋಗ ಆಗಲಿ ಎಂದು ಬೆಳಗ್ಗೆ 7 ರಿಂದ 11ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಜನರು, ಬೆಳಗ್ಗೆ ಮನೆಯಿಂದ ಹೊರಬಂದರೆ ಕೊರೊನಾ ಬರುವುದಿಲ್ಲ ಎನ್ನುತ್ತಿದ್ದಾರೆ.

author img

By

Published : Apr 17, 2020, 1:14 PM IST

ಬಳ್ಳಾರಿಯಲ್ಲಿ ಲಾಕ್​ಡೌನ್​ ಉಲ್ಲಂಘನೆ
ಬಳ್ಳಾರಿಯಲ್ಲಿ ಲಾಕ್​ಡೌನ್​ ಉಲ್ಲಂಘನೆ

ಬಳ್ಳಾರಿ: ಲಾಕ್ ಡೌನ್ ಉಲ್ಲಂಘಿಸಿ ಗಣಿನಾಡು ಜನರು ಬೆಳ್ಳಂಬೆಳಗ್ಗೆ ಜಾಗಿಂಗ್​ ಮಾಡುವ ನೆಪದಲ್ಲಿ ಮನೆಯಿಂದ ಹೊರಬರುತ್ತಿದ್ದಾರೆ.

ಮನೆಯಿಂದ ಹೊರಬರುವ ಜನರು, ರೇಡಿಯೋ ಪಾರ್ಕ್ ರಸ್ತೆಯಲ್ಲಿ ನಾಲ್ಕು- ಐದು ಕೀಲೋ ಮೀಟರ್ ವಾಕಿಂಗ್, ಜಾಗಿಂಗ್ ಮಾಡುತ್ತಿದ್ದಾರೆ. ಈ ವೇಳೆ, ಮಾಸ್ಕ್​ಕೂಡ ಇಲ್ಲ ಹಾಗೆ ಸಾಮಾಜಿಕ ಅಂತರವೂ ಇಲ್ಲ. ಇನ್ನು ಜನರಿಗೆ ಉಪಯೋಗ ಆಗಲಿ ಎಂದು ಬೆಳಗ್ಗೆ 7 ರಿಂದ 11 ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಜನರು, ಬೆಳಗ್ಗೆ ಮನೆಯಿಂದ ಹೊರಬಂದರೆ ಕೊರೊನಾ ಬರುವುದಿಲ್ಲ ಎನ್ನುತ್ತಿದ್ದಾರೆ.

ಬಳ್ಳಾರಿಯಲ್ಲಿ ಲಾಕ್​ಡೌನ್​ ಉಲ್ಲಂಘನೆ

ಈ ವಾಕಿಂಗ್, ಜಾಗಿಂಗ್ ಮಾಡುವ ಜನರೆಲ್ಲರೂ ವಿದ್ಯಾವಂತರೇ ಎಂಬುದು ವಿಪರ್ಯಾಸ. ಇದರಲ್ಲಿ ಬ್ಯಾಂಕ್ ಉದ್ಯೋಗಿಗಳು, ಉದ್ಯಮಿಗಳು, ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ನೌಕರಸ್ಥರು, ವಯಸ್ಕರು, ಯುವಕರು, ಯುವತಿಯರು, ಚಿಕ್ಕ ಚಿಕ್ಕ ಮಕ್ಕಳು ಸಹ ತಮ್ಮ ಕುಟುಂಬದೊಂದಿಗೆ ಬಂದು ರಸ್ತೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.